ಗೇರುಕಟ್ಟೆ: ಕೊರಂಜ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಮೆಟ್ರಿಕ್ ಮೇಳದಲ್ಲಿ ಮಕ್ಕಳಿಂದ ಭರ್ಜರಿ ವ್ಯಾಪಾರ ಫೆ. 15ರಂದು ನಡೆಯಿತು.
ಭಾರತೀಯ ಭೂ ಸೇನೆಯ ಯೋಧ ಪ್ರಮೋದ್ ಗೌಡ ಬಾಕಿಮಾರು ಉದ್ಘಾಟಿಸಿ, ಮಾತನಾಡಿ ಮಕ್ಕಳಲ್ಲಿ ಸ್ವ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವಲ್ಲಿ ಇಂತಹ ವ್ಯಾಪಾರ ಮೇಳ ಸಹಕಾರಿಯಾಗುತ್ತದೆ ಎಂದರು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಬಿ. ಅಧ್ಯಕ್ಷತೆ ವಹಿಸಿದ್ದರು.
ಮೇಳದಲ್ಲಿ ಸುಮಾರು ನೂರಕ್ಕೂ ಹೆಚ್ಚು ಅಂಗಡಿಗಳು, ಬಸಳೆ, ಅಲಸಂಡೆ, ತೊಂಡೆ, ಅನಾನಸ್, ಹಲಸಿನ ಗುಜ್ಜೆ ಹಲಸಿನ ಕಾಯಿ, ವಿಳ್ಯದೇಲೆ, ಕಲ್ಲಂಗಡಿ, ಸೌತೆಕಾಯಿ, ಈರೋಳು, ತೆಂಗಿನಕಾಯಿ, ಕಸಬರಿಕೆ, ಗೆಡ್ಡೆ-ಗೆಣಸು, ಸೊಪ್ಪು, ವಿವಿಧ ರೀತಿಯ ತಂಪು ಪಾನಿಯ, ತಿಂಡಿ ತಿನಿಸು, ಪಾನಿಪೂರಿ, ಚರುಮುರಿ ಹೀಗೆ ವಿವಿಧ ಬಗೆಯ ಉತ್ಪನ್ನಗಳನ್ನು ಮಕ್ಕಳು ಮೆಟ್ರಿಕ್ ಮೇಳದಲ್ಲಿ ಮಾರಾಟ ಮಾಡಿದರು.
ಶಾಲಾ ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷೆ ಮುನೀರಾ ರಿಯಾಝ್, ಸದಸ್ಯರಾದ ಬಶೀರ್, ನಝೀರ್, ಮುಖ್ಯ ಶಿಕ್ಷಕಿ ಶಾಂತಾ ಎಸ್. 250ಕ್ಕೂ ಮಿಕ್ಕಿ ಪೋಷಕರು, ಸ್ಥಳೀಯ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಊರವರು ಭಾಗವಹಿಸಿ ಸಹಕರಿಸಿದರು.