ವಕ್ಫ್ ತಿದ್ದುಪಡಿ ಮಸೂದೆಯ ವರದಿಯನ್ನು ವಿರೋಧಿಸಿ ಭಿತ್ತಿಪತ್ರ ಪ್ರದರ್ಶನ

0

ಕುವೆಟ್ಟು: ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಕ್ಫ್ ತಿದ್ದುಪಡಿ ಮಸೂದೆಯ ವರದಿಯನ್ನು ರಾಜ್ಯಸಭೆಯಲ್ಲಿ ಮಂಡಿಸಿದ ಜಂಟಿ ಸಂಸದೀಯ ಸಮಿತಿಯ ನಡೆಯನ್ನು ವಿರೋಧಿಸಿ ಫೆ. 14ರಂದು ಜುಮಾ ನಮಾಝ್ ನ ನಂತರ ಮದ್ದಡ್ಕ ಜುಮಾ ಮಸೀದಿ ಮುಂಭಾಗದಲ್ಲಿ ಭಿತ್ತಿಪತ್ರ ಪ್ರದರ್ಶಿಸಲಾಯಿತು.

ಮಸೀದಿ ಖತೀಬ ಹಾಫಿಲ್ ಮುಹೀನುದ್ದೀನ್ ರಝ್ವಿ ಅಲ್ ಅಮ್ಜದಿ, ಜಮಾಹತ್ ನ ಉಪಾಧ್ಯಕ್ಷ ಹೈದರ್ ಎಚ್. ಎಸ್., ಸಾಲಿಹ್ ಆಲಂದಿಲ, ಪ್ರ.ಕಾರ್ಯದರ್ಶಿ ಎಂ. ಸಿರಾಜ್ ಚಿಲಿಂಬಿ, ಕಾರ್ಯದರ್ಶಿ ಎಂ. ಸಾದಿಕ್, ಕೋಶಾಧಿಕಾರಿ ರಿಯಾಝ್ ಸಬರಬೈಲ್, ಲೆಕ್ಕ ಪರಿಶೋಧಕ ಪಿ. ಎಂ. ಅಹ್ಮದ್ ಇಬ್ರಾಹಿಂ ಮತ್ತು ಜಮಾಹತ್ ನ ಹಿರಿಯರು, ಇನ್ನಿತರ ಸಂಘ ಸಂಸ್ಥೆಗಳ ನಾಯಕರು, ಜಮಾಅತ್ ಭಾಂದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here