ನಾರಾವಿ: ಶ್ರೀ ಸೂರ್ಯ ನಾರಾಯಣ ದೇವಸ್ಥಾನದ ಸುಮಾರು 55 ವರ್ಷಗಳ ಇತಿಹಾಸವನ್ನು ಹೊಂದಿರುವ ಭಜನಾ ಮಂಡಳಿಯ ಮಹಾಸಭೆಯು ದೇವಸ್ಥಾನದ ವಠಾರದಲ್ಲಿ ನಡೆಯಿತು.
ಅಧ್ಯಕ್ಷರಾಗಿ ನಾರಾಯಣ ಪೂಜಾರಿ ಈದು, ಉಪಾಧ್ಯಕ್ಷರಾಗಿ ಪ್ರೇಮ ಭಟ್, ಜಯಕರ ಪೂಜಾರಿ, ಲಕ್ಷ್ಮಣ ಆಚಾರ್ಯ, ಪ್ರಧಾನ ಕಾರ್ಯದರ್ಶಿಯಾಗಿ ವಿನೋದ ಪಿ. ಶೆಟ್ಟಿ, ಜೊತೆ ಕಾರ್ಯದರ್ಶಿ ಯಾಗಿ ವಿದ್ಯಾ ಭಟ್, ಪ್ರಭಾಕರ ಪೂಜಾರಿ ಕೋಶಾಧಿಕಾರಿಯಾಗಿ, ಸತೀಶ್ ಮಂಡಳಿ ಗೌರವಾಧ್ಯಕ್ಷರಾಗಿ, ರವೀಂದ್ರ ಪೂಜಾರಿ ಹಾಗೂ ಕಾರ್ಯಕಾರಿ ಸಮಿತಿಯನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರವೀಂದ್ರ ಪೂಜಾರಿ ಉಪಸ್ಥಿತಿಯಲ್ಲಿ ರಚಿಸಲಾಯಿತು.