ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆ.15ರಂದು ಮೆಟ್ರಿಕ್ ಮೇಳ (ವ್ಯಾಪಾರ ಮೇಳ) ನಡೆಯಿತು.
ಉದ್ಯಮಿ, ಶಾಲಾ ಶತಮಾನೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಮೋಹನ್ ಕುಮಾರ್ ಉದ್ಘಾಟಿಸಿ ಮಾತನಾಡಿ, “ಮಕ್ಕಳಲ್ಲಿ ಭವಿಷ್ಯದ ಹಿತದೃಷ್ಟಿಯಿಂದ ವ್ಯಾಪಾರ, ವ್ಯವಹಾರ ಕೌಶಲ ಬೆಳೆಸುವುದು ಉತ್ತಮ. ಇದಕ್ಕೆ ಇಂತಹ ವ್ಯಾಪಾರ ಮೇಳ ಪೂರಕ’ ಎಂದರು.
ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಶರತ್ ಕೃಷ್ಣ
ಪಡುವೆಟ್ನಾಯ, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಯು.ಎಚ್., ಸದಸ್ಯರಾದ ಸೋಮಶೇಖರ ಶೆಟ್ಟಿ, ಅನಂತಕೃಷ್ಣ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್, ಉಪಾಧ್ಯಕ್ಷೆ ಪ್ರತಿಮಾ, ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ನಾಯಕ್, ವಿದ್ಯಾರ್ಥಿಗಳ ಹೆತ್ತವರು, ಶಿಕ್ಷಕ ವೃಂದ ಉಪಸ್ಥಿತರಿದ್ದರು.
ಸುಮಾರು 50 ಮಳಿಗೆಗಳಲ್ಲಿ ವಿದ್ಯಾರ್ಥಿಗಳು ವ್ಯಾಪಾರ ವ್ಯವಹಾರ ನಡೆಸಿದರು. ತರಕಾರಿ, ಆಹಾರ ಪದಾರ್ಥ ಇತ್ಯಾದಿ ವಸ್ತುಗಳು ಮಾರಾಟವಾದವು.