

ಬೆಳ್ತಂಗಡಿ: ಜೀವನ ಶಿಕ್ಷಣವನ್ನು ರೂಪಿಸುವ ಉಜಿರೆಯ ರತ್ನಮಾನಸದ ಮುಖ್ಯ ಪಾಲಕರಾಗಿ 1972 ರಿಂದ 2012ರ ತನಕ ಕಾರ್ಯ ನಿರ್ವಹಿಸಿದ್ದ ನಿವೃತ್ತ ಶಿಕ್ಷಕ ಕಾಶ್ಮೀರಿ ಮೆನೇಜಸ್ (79ವ) ಫೆ.12ರಂದು ರಾತ್ರಿ ಮಂಗಳೂರಿನಲ್ಲಿ ನಿಧನರಾಗಿದ್ದಾರೆ.
ಇವರು ಉಜಿರೆ ಶ್ರೀ ಧರ್ಮಸ್ಥಳ ಸೆಕೆಂಡರಿ ಶಾಲೆ, ಎಸ್. ಡಿ. ಎಂ ಹೈಸ್ಕೂಲ್ ಧರ್ಮಸ್ಥಳದಲ್ಲೂ ಶಿಕ್ಷಕರಾಗಿದ್ದರು. ಎಸ್. ಡಿ. ಎಂ ರೆಸಿಡೆನ್ಶಿಯಲ್ ಕಾಲೇಜಿನ ನಿರ್ದೇಶಕರೂ ಆಗಿದ್ದರು. ಕೃಷಿ ತಜ್ಞರಾಗಿಯೂ ಕೆಲಸ ಮಾಡಿದ್ದಾರೆ.
ಇವರು ಪತ್ನಿ, ಇಬ್ಬರು ಮಕ್ಕಳು, ಮೊಮ್ಮಕ್ಕಳನ್ನು ಅಗಲಿದ್ದಾರೆ.