

ವೇಣೂರು: ಸಜೀಪ ಮೂಡ ಮೂರ್ತೆದಾರರ ಸೇವಾ ಸಹಕಾರಿ ಸಂಘದ ವೇಣೂರು ಶಾಖೆಯಲ್ಲಿ ಈ ಸ್ಟಾಂಪಿಂಗ್ ಉದ್ಘಾಟನಾ ಸಮಾರಂಭವು ಫೆ. 12ರಂದು ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು. ವೇಣೂರು ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ ಈ ಸ್ಟಾಂಪಿಂಗ್ ಉದ್ಘಾಟಿಸಿ ಶುಭ ಹಾರೈಸಿದರು.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವೇಣೂರು ಶಾಖೆಯ ಪ್ರಬಂಧಕ ರಂಜಿತ್ ದೀಪ ಬೆಳಗಿಸಿದರು. ವೇಣೂರು ಜುಮ್ಮಾ ಮಸೀದಿ ಅಧ್ಯಕ್ಷ ಜಕ್ರೀಯ ಶುಭ ಹಾರೈಸಿದರು.

ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಗ್ರಾಹಕರನ್ನು ಉದ್ದೇಶಿಸಿ ಮಾತನಾಡಿ ಇದರ ಸೇವೆಯನ್ನು ಎಲ್ಲಾ ಗ್ರಾಹಕರು ಪಡೆದುಕೊಂಡು ನಮ್ಮ ಸಂಘದಲ್ಲಿ ಉತ್ತಮ ರೀತಿಯಲ್ಲಿ ವ್ಯವಹರಿಸಿ ಸಂಘದ ಶ್ರೇಯೋಭಿವೃದ್ಧಿಗಾಗಿ ಸಹಕರಿಸಬೇಕು ಎಂದರು.
ವೇಣೂರು ಮೂರ್ತೇದರರ ಅಧ್ಯಕ್ಷ ರಮೇಶ್ ಪೂಜಾರಿ, ವೆಂಕಟರಮಣ ಕೋ ಆಪರೇಟಿವ್ ವೇಣೂರು ಶಾಖಾ ವ್ಯವಸ್ಥಾಪಕ ಗಾಯನ್ ಉಪಸ್ಥಿತರಿದ್ದರು.
ಸಂಘದ ನಿರ್ದೇಶಕ ಸುಂದರ ಪೂಜಾರಿ, ರಮೇಶ್ ಅನ್ನಪ್ಪಾಡಿ, ಜಯಶಂಕರ ಕಾನ್ಸ್ ಲೆ, ಅರುಣ್ ಕುಮಾರ್ ಎಮ್., ಆಶಿಶ್ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಮತಾ ಜಿ., ಎ. ಜಿ. ಎಂ. ಶಿಲ್ಪಾ ಉಪಸ್ಥಿತರಿದ್ದರು. ನಿರ್ದೇಶಕ ಅರುಣ್ ಕುಮಾರ್ ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕ ವಿಜಯ ಕೆ. ವಂದಿಸಿದರು.