

ಉಜಿರೆ: ರತ್ನಮಾನಸ ಜೀವನ ಶಿಕ್ಷಣ ವಸತಿ ನಿಲಯದಲ್ಲಿ ಭೂಮಿ ಹುಣ್ಣಿಮೆಯನ್ನು ಫೆ. 12ರಂದು ಆಚರಿಸಲಾಯಿತು. ಉಜಿರೆ
ಶ್ರೀ .ಧ .ಮ. ಪದವಿ ಕಾಲೇಜಿನ ಸಂಸ್ಕೃತ ಮುಖ್ಯಸ್ಥ ಶ್ರೀಧರ್ ಭಟ್ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತ ಭೂಮಿಯು ನಮ್ಮ ಬದುಕಿಗೆ ಆಧಾರವಾಗಿದೆ. ಗಿಡಮರಗಳು ಬೆಳೆಯಲು ಮತ್ತು ಒಳ್ಳೆಯ ಫಲವನ್ನು ನೀಡಲು ಮಣ್ಣು ಬೇಕು ಈ ಭೂಮಿ ಹುಣ್ಣಿಮೆಯಂದು ಭೂಮಿ ತಾಯಿ ಪೂಜೆಯನ್ನು ಹಿಂದಿನಿಂದಲೂ ಮಾಡುತ್ತಾ ಬಂದಿರುತ್ತಾರೆ . ಇಂದಿನಿಂದ ಭೂಮಿ ತಾಯಿ ಫಲವತ್ತತೆಗೆ ತಯಾರಾಗಿದ್ದಾಳೆ ಎಂಬ ಮಾತಿದೆ .
ಈ ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಹೇಳಿಕೊಡಬೇಕು ಎಂದು ಹೇಳಿದರು.
ರತ್ನಮಾನಸ ವಸತಿ ನಿಲಯದ ಪಾಲಕ ಯತೀಶ್ ಕೆ.ಬಳಂಜ ಮಾತನಾಡುತ್ತಾ ಈ ದಿನ ಭೂಮಿ ತಾಯಿ ರುತುಮತಿ ಆಗುವ ದಿನ, ಈ ದಿನ ಭೂಮಿಗೆ ಯಾವುದೇ ತೊಂದರೆ ಆಗುವ ಕೆಲಸ ಮಾಡಬಾರದು ಎಂದು ಹೇಳುತ್ತಾರೆ.
ಈ ದಿನ ಭೂಮಿ ತಾಯಿಗೆ ನಮಸ್ಕರಿಸಿ ಕ್ಷಮೆಯನ್ನು ಕೇಳಬೇಕು ಎಂದು ವಿದ್ಯಾರ್ಥಿಗಳಿಗೆ ಅರ್ಥಪೂರ್ಣವಾಗಿ ತಿಳಿಸಿದರು.
ವಿದ್ಯಾರ್ಥಿಗಳು ರತ್ನಮಾನಸದ ಎದುರುಗಡೆ ಸೆಗಣಿ ಸಾರಿಸಿ ಭೂಮಿಗೆ ಎಣ್ಣೆ ಹೊಯ್ದು ಕುಂಕುಮ, ಧೂಪ, ದೀಪ ಇಟ್ಟು ಹಾಗೂ ಅಕ್ಕಿ ಮತ್ತು ಹುರುಳಿಯಿಂದ ಮಾಡಲಾದ ಪುಡಿ ( ನನ್ನರಿ) ಮತ್ತು ಗೋಳಿ ಎಲೆಯಿಂದ ಮಾಡಲಾದ ಕಡಬುವನ್ನಿಟ್ಟು ಭೂಮಿ ತಾಯಿಯನ್ನು ಪೂಜಿಸಲಾಯಿತು.