

ನಿಡ್ಲೆ: ಬರೆಂಗಾಯ ಭೂತಳಗುಡ್ಡೆ ನಿವಾಸಿ ರವೀಂದ್ರ ರಾವ್ (52 ವ.) ರವರು ಅಸೌಖ್ಯದಿಂದ ಫೆ. 10ರಂದು ನಿಧನರಾದರು. ಆರ್. ಎಸ್. ಎಸ್ ಕಾರ್ಯಕರ್ತರಾಗಿ, ಪಿಗ್ನಿ ಕಲೆಕ್ಟರ್ ರಾಗಿ, ಬರೆಂಗಾಯ ಹಿ. ಪ್ರಾ. ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಇವರು ಪ್ರಸ್ತುತ ಸುರಭಿ ಕ್ಯಾಂಟೀನ್ ನಡೆಸುತ್ತಿದ್ದರು. ಮೃತರು ಪತ್ನಿ, ಪುತ್ರ ಪುತ್ರಿ, ಬಂಧು ಬಳಗವನ್ನು ಅಗಲಿದ್ದಾರೆ.