

ಗೇರುಕಟ್ಟೆ: ಗೇರುಕಟ್ಟೆ ಅಡ್ಡಕೊಡಂಗೆ ಲಿಂಗಪ್ಪ ಪೂಜಾರಿಯವರ ಮನೆಯಲ್ಲಿ ಸುವರ್ಣ ಕುಟುಂಬಸ್ಥರ ದೈವಗಳಿಗೆ ನರ್ತನ ಸೇವೆ ಫೆ. 9 ರಂದು ನಡೆಯಿತು. ಬೆಳಿಗ್ಗೆ ಶ್ರೀ ನಾಗ ದೇವರ ಸನ್ನಿಧಿಯಲ್ಲಿ ತನು ಸೇವೆ, ಶ್ರೀ ಸತ್ಯನಾರಾಯಣ ಪೂಜೆ, ವೆಂಕಟ್ರಮಣ ದೇವರ ಮುಡಿಪು ಕಟ್ಟುವ ಕಾರ್ಯಕ್ರಮ ನಡೆಯಿತು. ಸಂಜೆ ಭಂಡಾರ ಬಂದು ರಾತ್ರಿ ಜಾಗದ ಕಲ್ಲುರ್ಟಿ ಪಂಜುರ್ಲಿ, ಗುಳಿಗ, ಹಿಪ್ಪದಜ್ಜ ದೈವಗಳ ನೇಮೋತ್ಸವ, ಬಳಿಕ ಕುಟುಂಬದ ಕಲ್ಲುರ್ಟಿ ಪಂಜುರ್ಲಿ, ರಾಹುಗುಳಿಗ, ಗುಳಿಗ ದೈವಗಳ ನರ್ತನ ಸೇವೆ ಜರಗಿತು.

ಸುವರ್ಣ ಕುಟುಂಬಸ್ಥರು, ಊರವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಹಕಾರ ನೀಡಿದ ವೀರಣ್ಣ ಪೂಜಾರಿ ಸಮಿತಿಯ ಅಧ್ಯಕ್ಷ ನಾರಾಯಣ ಪೂಜಾರಿ ಉಮನೊಟ್ಟು, ಉಪಾಧ್ಯಕ್ಷ ಉಮೇಶ ಪೂಜಾರಿ ಪಾರ, ಕಾರ್ಯದರ್ಶಿ ತಾರಾನಾಥ ಬಳ್ಳಿದಡ್ಡ, ಜತೆ ಕಾರ್ಯದರ್ಶಿ ನಂದನ್ ಮುಗೇರು, ಕೋಶಾಧಿಕಾರಿ ರೋಹಿತ್ ಅಡ್ಡಕೊಡಂಗೆ ಇವರನ್ನು ಗೌರವಾಧ್ಯಕ್ಷ ಲಿಂಗಪ್ಪ ಪೂಜಾರಿ ಗೌರವಿಸಿದರು. ಕುಟುಂಬದ ಸದಸ್ಯರು ಸಹಕರಿಸಿದರು.