

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರಕಾರಿ ಹಿರಿಯ ಹಾಗೂ ಪದವಿಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘ ಬೆಂಗಳೂರು ಇದರ ಬೆಳ್ತಂಗಡಿ ತಾಲೂಕು ಘಟಕದ ಪುನಾರಚನಾ ಸಭೆಯು ಫೆ. 8 ರಂದು ಬೆಳ್ತಂಗಡಿ ರೋಟರಿ ಕ್ಲಬ್ ಸಭಾಂಗಣದಲ್ಲಿ ಜರಗಿತು.
ಹಾಲಿ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದ. ಕ. ಜಿಲ್ಲಾಧ್ಯಕ್ಷ ನಿಂಗರಾಜು ಭಾಗವಹಿಸಿ ನೂತನ ತಾಲೂಕು ಘಟಕದ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು ಜಿಲ್ಲಾ ಉಪಾಧ್ಯಕ್ಷ ಮಹಾಲಿಂಗ ಕೆ. ನೂತನ ಪದಾಧಿಕಾರಿಗಳ ಜವಾಬ್ದಾರಿ ಮತ್ತು ಸಂಘದ ಆಶಯಗಳನ್ನು ತಿಳಿಯಪಡಿಸಿದರು. ತಾಲೂಕು ಘಟಕದ ಗೌರವಾಧ್ಯಕ್ಷ ಜಗನ್ನಾಥ ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.
ನೂತನ ತಾಲೂಕು ಘಟಕದ ಗೌರವಾಧ್ಯಕ್ಷ ಜಗನ್ನಾಥ ಎಂ. ಸ.ಹಿ.ಪ್ರಾ.ಶಾಲೆ ಕರ್ನೋಡಿ ಲಾಯಿಲ, ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಸಹಿಪ್ರಾಶಾಲೆ ಅಂಡೆತಡ್ಕ, ಉಪಾಧ್ಯಕ್ಷರು ಮಹಾಲಿಂಗ ಕೆ ಸ.ಹಿ.ಪ್ರಾ.ಶಾಲೆ ಕರಾಯ, ಭಾಸ್ಕರ್ ಸ.ಹಿ.ಪ್ರಾ.ಶಾಲೆ ಕುವೆಟ್ಟು ಕೋಶಾಧಿಕಾರಿ ಬಳಿರಾಮ ಲಮಾಣಿ ಸ.ಹಿ.ಪ್ರಾ.ಶಾಲೆ ಕೊಯ್ಯೂರು, ಸಹ ಕಾರ್ಯದರ್ಶಿಗಳು ಮೊಹಮ್ಮದ್ ಫಾರೂಕ್ ಹೆಚ್., ಸ.ಹಿ.ಪ್ರಾ.ಶಾಲೆ ಪಡಂಗಡಿ ಮಂಜುಳಾ ಜೆ. ಟಿ., ಸ.ಹಿ.ಪ್ರಾ.ಶಾಲೆ ಗುರಿಪಳ್ಳ, ಸಂಘಟನಾ ಕಾರ್ಯದರ್ಶಿಗಳು ಶಿವಸ್ವಾಮಿ ಎ. ಎಸ್., ಸ.ಹಿ.ಪ್ರಾ.ಶಾಲೆ ಪುತ್ತಿಲ ಚಂದ್ರಾವತಿ ಕೆ., ಸ.ಹಿ.ಪ್ರಾ.ಶಾಲೆ ಮೈರೋಳಡ್ಕ, ನಿರ್ದೇಶಕರು ಸುಫಲಾ ಎಸ್. ಸ.ಹಿ.ಪ್ರಾ.ಶಾಲೆ, ಕೂಕ್ರಬೆಟ್ಟು ಪುಷ್ಪ ಸ.ಹಿ.ಪ್ರಾ.ಶಾಲೆ ನಡ, ಉಮೇಶ್ ನಾಯ್ಕ ಎಸ್. ಸ.ಹಿ.ಪ್ರಾ.ಶಾಲೆ ಮಾವಿನಕಟ್ಟೆ ಉಮಾ ಡಿ. ಸ.ಹಿ.ಪ್ರಾ.ಶಾಲೆ ಗುರುವಾಯನಕೆರೆ. ಆಯ್ಕೆ ಮಾಡಲಾಯಿತು.
ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಎಲ್ಲರನ್ನು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರೆ, ಸಹ ಕಾರ್ಯದರ್ಶಿ ಮೊಹಮ್ಮದ್ ಫಾರೂಕ್ ಹೆಚ್ ವಂದನಾರ್ಪಣೆಗೈದರು.