

ಬೆಳ್ತಂಗಡಿ: ದೇಯಿ ಬೈದೆದಿ ಕೋಟಿ ಚೆನ್ನಯ ಮೂಲ ಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಮಾರ್ಚ್ 1 ರಿಂದ 5ರ ತನಕ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವವನ್ನು ಯಶಸ್ಸು ಗೊಳಿಸುವ ಬಗ್ಗೆ ಬೆಳ್ತಂಗಡಿ ತಾಲೂಕಿನ ಮೇಲಂತ ಬೆಟ್ಟು ಗ್ರಾಮದ ಪಾಲೆತ್ತಾಡಿ ಗುತ್ತುವಿನಲ್ಲಿ ಗೆಜ್ಜೆ ಗಿರಿಯ ಭಕ್ತಾಭಿಮಾನಿಗಳ ಸಮಾಲೋಚನ ಸಭೆಯನ್ನು ಫೆ. 9ರಂದು ಸಂಜೆ ಗಂಟೆ 3.00ಕ್ಕೆ ಆಯೋಜಿಸಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪಾಲೆತ್ತಾಡಿ ಗುತ್ತಿನ ಯಜಮಾನರಾದ ನಾಗಮ್ಮ ಕುಂಜರ ಪೂಜಾರಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಶ್ರೀ ಕ್ಷೇತ್ರ ಗೆಜ್ಜಗಿರಿ ಜಾತ್ರೆೋತ್ಸವ ಸಮಿತಿಯ ಬೆಳ್ತಂಗಡಿ ತಾಲೂಕಿನ ಪ್ರಧಾನ ಸಂಚಾಲಕ ನಿತ್ಯಾನಂದ ನಾವರ ಶ್ರೀ ಕ್ಷೇತ್ರದಲ್ಲಿ ನಡೆಯುವ ಮಡಿಲು ಸೇವೆ ಹಾಗೂ ಉತ್ಸವದ ಮಾಹಿತಿಯನ್ನು ಸಭೆಗೆ ನೀಡಿ ತಾಲೂಕಿನ ಎಲ್ಲಾ ಭಕ್ತಾಭಿಮಾನಿಗಳನ್ನು ಜಾತ್ರೋತ್ಸವಕ್ಕೆ ಆಮಂತ್ರಿಸಿದರು.
ವೇದಿಕೆಯಲ್ಲಿ ಗಿರೀಶ್ ಕುಮಾರ್ ಒಡ್ಯಾನೆ ಗುತ್ತು, ಶ್ರೀ ನಾಗಬ್ರಹ್ಮ ದೇವಸ್ಥಾನ ಮೇಲಂತ ಬೆಟ್ಟು ಇದರ ಆಡಳಿತ ಸಮಿತಿಯ ಅಧ್ಯಕ್ಷ ನಾರಾಯಣ ಪೂಜಾರಿ, ಮೇಲಂತ ಬಿಟ್ಟು ಗ್ರಾಮ ಪಂಚಾಯತ್ ಸದಸ್ಯ ಚಂದ್ರಹಾಸ್ ನೂಜೇಲು, ಹಿರಿಯ ದೈವಾರಾಧಕರಾದ ಮುತ್ತಯಾನೆ ಧರ್ಣಪ್ಪ ಪೂಜಾರಿ, ಯುವವಾಹಿನಿ ಬೆಳ್ತಂಗಡಿ ಇದರ ನಿಯೋಜಿತ ಅಧ್ಯಕ್ಷ ಗುರುರಾಜ್ ಗುರಿಪಳ್ಳ, ಯುವ ಬಿಲ್ಲವ ವೇದಿಕೆ ಬೆಳ್ತಂಗಡಿ ಇದರ ಅಧ್ಯಕ್ಷ ಪ್ರಸಾದ್ ಎಮ್. ಕೆ. ಶಿರ್ಲಾಲು, ಯುವ ವಾಹಿನಿ ಬೆಳ್ತಂಗಡಿ ಇದರ ನಿಯೋಜಿತ ಕಾರ್ಯದರ್ಶಿ ಹಾಗೂ ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರೋತ್ಸವ ಸಮಿತಿ ಅಳದಂಗಡಿ ವಲಯ ಸಂಚಾಲಕಿ ಮಧುರ ರಾಘವ, ಲಕ್ಷ್ಮೀಶ ಪಾಲೆತ್ತಾಡಿ, ಹರಿಪ್ರಸಾದ್ ಪಾಲೆತ್ತಾಡಿ ಬಾಲಕೃಷ್ಣ ಪೂಜಾರಿ ಪಾಲೆತ್ತಾಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದಿವ್ಯ ಸಂದೀಪ್ ಕಾನದಕಲ, ಭೋಜ ಪೂಜಾರಿ ಅಡಕಬೈಲು, ರಮೇಶ್ ಗುರುಸ್ವಾಮಿ, ಅಕ್ಷತ್ ಮೂಡಲ, ಪ್ರಭಾಕರ ಬಂಗೇರ ಪಾಲೆತ್ತಾಡಿ, ಪ್ರಸನ್ನ ಅಂಚನ್ ತುಳುನಾಡ ತುಡರ್ ಹಾಗೂ ಶ್ರೀ ಕ್ಷೇತ್ರ ಗೆಜ್ಜಿಗಿರಿಯ ಹಲವಾರು ಭಕ್ತಾಭಿಮಾನಿಗಳು ಭಾಗವಹಿಸಿದ್ದರು.
ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ಮಾಜಿ ನಿರ್ದೇಶಕ ಸಚಿನ್ ನೂಜೋಡಿ ಕಾರ್ಯಕ್ರಮವನ್ನು ಸಂಘಟಿಸಿ ಬಂದ ಅತಿಥಿಗಳನ್ನು ಸ್ವಾಗತಿಸಿದರು. ಪಾಲೆತ್ತಾಡಿಗುತ್ತುವಿನ ಶ್ರೀ ಲಕ್ಷ್ಮೀಶ ಧನ್ಯವಾದವಿತ್ತರು.