ಫೆ. 9: ಬಳಂಜ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯ ಸದಸ್ಯರು ಗಂಡಿಬಾಗಿಲು ಸಿಯೊನ್ ಆಶ್ರಮಕ್ಕೆ ಭೇಟಿ – ದಾನ್ ಕಾರ್ಯಕ್ರಮ ಆಚರಣೆ

0

ಬಳಂಜ: ಹಲವು ಜಿಲ್ಲೆಗಳಲ್ಲಿ ಹಾಗೂ ಹೊರ ರಾಜ್ಯದಲ್ಲೂ ಕುಣಿತ ಭಜನೆಯನ್ನು ನೀಡಿ ಹೆಸರನ್ನು ಪಡೆದಿರುವ ಬಳಂಜದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರಿಂದ ಫೆ. 9ರಂದು ಬೆಳ್ತಂಗಡಿ ತಾಲೂಕಿನ ಗಂಡಿಬಾಗಿಲು ಸಿಯೊನ್ ಅಶ್ರಮಕ್ಕೆ ಭೇಟಿ ನೀಡಿ ಮಂಡಳಿಯ ವತಿಯಿಂದ ಅಲ್ಲಿನ ಆಶ್ರಮವಾಸಿಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಿದ್ದು, 2ನೇ ವರ್ಷದ ದಾನ್ ಕಾರ್ಯಕ್ರಮವನ್ನು ಆಶ್ರಮದಲ್ಲಿ ನಡೆಸಲಾಗುವುದು ಎಂದು ಮಂಡಳಿಯ ಪ್ರಧಾನ ಸಂಚಾಲಕ ಹರೀಶ್ ವೈ ಚಂದ್ರಮ ಸುದ್ದಿ ಬಿಡುಗಡೆ ಪತ್ರಿಕೆಗೆ ತಿಳಿಸಿದ್ದಾರೆ.

ಈಗಾಗಲೇ ಮಂಡಳಿಯು ಭಜನೆ ಮಾತ್ರವಲ್ಲದೆ ಹಲವಾರು ಸೇವಾ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿದ್ದು ಕಳೆದ ವರ್ಷ ಬಳಂಜದಲ್ಲಿ ನಡೆಸಿದ ದಾನ್ ಕಾರ್ಯಕ್ರಮದಲ್ಲಿ 15 ಮಂದಿ ಬಡ ಕುಟುಂಬಗಳಿಗೆ ಅಕ್ಕಿ ವಿತರಣೆಯನ್ನು ದಾನಿಗಳ ಸಹಕಾರದಿಂದ ಮಾಡಿದ್ದಾರೆ.

ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯ ಅರ್ಹ ಸದಸ್ಯರ ವಿದ್ಯಾಭ್ಯಾಸಕ್ಕೂ ಪ್ರೋತ್ಸಾಹ ನೀಡುತ್ತಿದ್ದು, ಸಮಾಜ ಸೇವೆಯಲ್ಲಿ ಉತ್ತಮ ಹೆಸರನ್ನು ಪಡೆದಿರುವ ಹರೀಶ್ ವೈ. ಚಂದ್ರಮ ಇವರ ಹೊಸ ಹೊಸ ಪರಿಕಲ್ಪನೆಯಲ್ಲಿ ಈ ವರ್ಷ ಸಿಯೊನ್ ಅಶ್ರಮದಲ್ಲಿರುವ 400ಕ್ಕೂ ಹೆಚ್ಚು ಆಶ್ರಮವಾಸಿಗಳನ್ನು ಹಾಗೂ ಅಲ್ಲಿನ ಅಡಳಿತ ಮಂಡಳಿಯ ಸೇವೆಯನ್ನು ಗುರುತಿಸಿ ಅಶ್ರಮಕ್ಕೆ ಆಹಾರ ಸಾಮಾಗ್ರಿಗಳನ್ನು ವಿತರಿಸುವ ದಾನ್ ಕಾರ್ಯಕ್ರಮವನ್ನು ಇಟ್ಟುಕೊಂಡಿರುವುದು ಶ್ಲಾಘನೀಯ ಹೆಜ್ಜೆಯಾಗಿದೆ.

ಇದರ ಜೊತೆಗೆ 1 ಗಂಟೆಯ ಕುಣಿತ ಭಜನೆಯನ್ನು ಸಹ ಇಟ್ಟುಕೊಂಡಿದ್ದೇವೆ. ಹಾಗೂ ಈ ಕಾರ್ಯಕ್ರಮದಲ್ಲಿ ಬಳಂಜ ಬಿಲ್ಲವ ಸಂಘದ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಹಾಗೂ ಬಳಂಜ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಸದಾನಂದ ಸಾಲಿಯಾನ್ ಬಳಂಜ ಹಾಗೂ ಮಂಡಳಿಯ ಎಲ್ಲಾ ಸದಸ್ಯರು ಉಪ ಸಂಚಾಲಕರು ಭಾಗವಹಿಸಲಿದ್ದಾರೆ ಎಂದು ಮಂಡಳಿಯ ಅಧ್ಯಕ್ಷ ಜ್ಯೋತಿ ಹಾಗೂ ತರಬೇತುದಾರರಾದ ಮಾನ್ಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here