ಬಂದಾರು: ಪಾಣೆಕಲ್ಲು ಶಿರಾಡಿ ಗ್ರಾಮ ದೈವ ಸಪರಿವಾರ ದೈವಸ್ಥಾನ ವಾರ್ಷಿಕ ಕಾಲಾವಧಿ ನೇಮೋತ್ಸವ ಫೆ. 8 ಮತ್ತು 9 ರಂದು ನಡೆಯಲಿದೆ.
ಫೆ. 1ರಂದು ಬೆಳಗ್ಗೆ ಗೊನೆ ಮುಹೂರ್ತ ನೆರವೇರಿದ್ದು, ಫೆ. 8 ಬೆಳಗ್ಗೆ 9ಗಂಟೆಗೆ ಶ್ರೀ ಪಾರ್ವತಿ ಪಂಚಲಿಂಗೇಶ್ವರ ದೇವಸ್ಥಾನ ಮುದ್ಯದ ಅರ್ಚಕ ಶ್ರೀ ಕೃಷ್ಣ ಪ್ರಸಾದ ಉಡುಪರ ನೇತೃತ್ವದಲ್ಲಿ ಸ್ಥಳ ಶುದ್ಧಿ, ನವಕ ಕಲಶ, ಗಣ ಹವನ, ದೈವಗಳಿಗೆ ಪರ್ವ, ಇತ್ಯಾದಿ ಹಾಗೂ ರಾತ್ರಿ 10ಗಂಟೆಗೆ ಬಂದಾರು ಕೆಲೆಂಜಿಮಾರು ಬಳಿಯಿಂದ ದೈವಗಳ ಭಂಡಾರ ಬರುವ ಕಾರ್ಯಕ್ರಮ ನಡೆಯಲಿದೆ.
ಫೆ. 9ರಂದು ಮುಂಜಾನೆ 4.00 ಗಂಟೆಗೆ ಶಿರಾಡಿ ದೈವ, ಕಲ್ಕುಡ ದೈವ ಹಾಗೂ ಪಿಲಿಚಾಮುಂಡಿ ದೈವಕ್ಕೆ ನೇಮೋತ್ಸವ ಪ್ರಾರಂಭ.
ಮಧ್ಯಾಹ್ನ 1ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ, ಸಾಯಂಕಾಲ 6ಗಂಟೆಗೆ ಬಸ್ತಿನಾಯಕ ನೇಮೋತ್ಸವ ನಡೆಯಲಿದೆ.
ಭಕ್ತಾಭಿಮಾನಿಗಳು ಆಗಮಿಸಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತನು-ಮನ-ಧನಗಳಿಂದ ಸಹಕರಿಸಿ ಸಿರಿಮುಡಿ ಗಂಧ-ಪ್ರಸಾದವನ್ನು ಸ್ವೀಕರಿಸಿ ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ನೇಮೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.