

ಬಳಂಜ: ತೆಂಕಕಾರಂದೂರು ನೂತನ ಕಟ್ಟಡದಲ್ಲಿ ಮಾಲಕ ಅರುಣ್ ಫೆರ್ನಾಂಡಿಸ್ ನೂತನವಾಗಿ ಪ್ರಾರಂಭಿಸಿದ ಜೋಶ್ ಅಲ್ಯೂಮಿನಿಯಂ ಯು.ಪಿ.ವಿ.ಸಿ ವಿಂಡೋ ಮತ್ತು ಆರೋ ಗ್ಲಾಸ್ ಪ್ಲೈ ವುಡ್ ಶುಭಾರಂಭವು ಫೆ. 1 ರಂದು ಶುಭಾರಂಭಗೊಂಡಿತು.

ಮಂಗಳೂರು ಧರ್ಮ ಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷ ಬಿಷಪ್ ಎಲೋಸಿಯಸ್ ಪೌಲ್ ಡಿಸೋಜಾ ಉದ್ಘಾಟಿಸಿ ಆಶೀರ್ವಚನಗೈದರು.

ಅಳದಂಗಡಿ ಸಂತ ಪೀಟರ್ ಕ್ಲೇವರ್ ಚರ್ಚ್ ಧರ್ಮ ಗುರು ಫಾ. ಎಲಿಯಸ್ ಡಿಸೋಜಾ, ಚರ್ಚ್ ಪಾಲನಾ ಪರಿಷತ್ ಕಾರ್ಯದರ್ಶಿ ಲಾರೆನ್ಸ್ ಪಾಯ್ಸ್, ಬೆಳ್ತಂಗಡಿ ಬಿಜೆಪಿ ಮಂಡಲ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಅಳದಂಗಡಿ ಗ್ರಾಮ ಪಂಚಾಯತ್ ಸದಸ್ಯ ಪ್ರಶಾಂತ್ ವೇಗಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಾಲಕರ ಮಾತ ಪಿತಾ ಅಲೆಕ್ಸ್ ಫೆರ್ನಾಂಡಿಸ್, ಜೆಸಿಂತಾ ಫೆರ್ನಾಂಡಿಸ್, ಕಟ್ಟಡ ಮಾಲಕ ಗುರುಪ್ರಸಾದ್ ಹೆಗ್ಡೆ, ಇಂಜಿನಿಯರ್ ಗಿರೀಶ್ ಶೆಟ್ಟಿ, ರಾಜೇಶ್ ಕುಲಾಲ್, ದೀಕ್ಷಿತ್, ಸ್ವರಣ್ ಸಿಂಗ್, ಸುರೇಶ್, ಆಚಾರ್ಯ, ನಂದೇಶ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಜೋಕಿಂ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.

ಮಾಲಕ ಅರುಣ್ ಫೆರ್ನಾಂಡಿಸ್ ಸ್ವಾಗತಿಸಿ ಸರ್ವರ ಸಹಕಾರ ಕೋರಿ ವಂದಿಸಿದರು.