

ಬಳಂಜ: ನಾಲ್ಕೂರು ಗ್ರಾಮದ ಕಂಚಿನಡ್ಕ ಶ್ರೀ ನಾಗಬ್ರಹ್ಮ ಮೂಜಿಲ್ನಾಯ ಬ್ರಹ್ಮಸ್ಥಾನದಲ್ಲಿ ಫೆ. 2 ರಂದು ಪ್ರತಿಷ್ಠಾ ವಾರ್ಷಿಕೋತ್ಸವ, ಆಶ್ಲೇಷ ಬಲಿ, ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಕ್ಷೇತ್ರದ ಅಧ್ಯಕ್ಷ ವಿನಯ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾನಿಂಜ ಮಲೆಯ ತಪ್ಪಲು ಪ್ರದೇಶದಲ್ಲಿ ಸುಂದರ ಪ್ರಕೃತಿ ವನಸಿರಿಯ ನಡುವೆ ಕಂಗೊಳಿಸುತ್ತಿರುವ ಈ ದೈವಸ್ಥಾನ ಹಾಗೂ ನಾಗಬ್ರಹ್ಮ ಸ್ಥಾನವನ್ನು ಕೆಲವು ವರ್ಷಗಳ ಹಿಂದೆ ಊರಿನ ಗ್ರಾಮಸ್ಥರು ಒಟ್ಟು ಸೇರಿ ಜೀರ್ಣೋದ್ಧಾರ ಮಾಡಿದ್ದರು.
ಪ್ರತಿ ತಿಂಗಳ ಸಂಕ್ರಾಂತಿಗೆ ವಿಶೇಷ ಪೂಜೆಗಳು ನಡೆಯುತ್ತಿದ್ದು, ಅರ್ಚಕರಾಗಿ ಜಯಂತ ಭಟ್ ಬರಮೇಲು, ಅಧ್ಯಕ್ಷರಾಗಿ ವಿನಯ್ ಶೆಟ್ಟಿ ಯೆಯಿಕುರಿ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಭಾಕರ್ ಪೂಜಾರಿ ಖಂಡಿಗ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸಮಿತಿಯ ಎಲ್ಲಾ ಸದಸ್ಯರು ಸಹಕಾರ ನೀಡುತ್ತಿದ್ದಾರೆ.