ಪಡಂಗಡಿ: ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಪಡಂಗಡಿ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘ ಇದರ ಸಂಯುಕ್ತ ಆಶ್ರಯದಲ್ಲಿ ಬೆನಕ ಹೆಲ್ತ್ ಸೆಂಟರ್, ಉಜಿರೆ ಮತ್ತು ಬೆನಕ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ, ಉಚಿತ ಆರೋಗ್ಯ ತಪಾಸಣಾ ಶಿಬಿರ ಫೆ. 8 ರಂದು ಬೆಳಿಗ್ಗೆ 9. 30ರಿಂದ 1. 30ರವರೆಗೆ ಪಡಂಗಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ‘ಸಮೃದ್ಧಿ ಸಭಾಭವನ’ ದಲ್ಲಿ ಜರಗಲಿರುವುದು. ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳಿಗ್ಗೆ ಗಂಟೆ 9.30ಕ್ಕೆ ಶ್ರೀ ಹರೀಶ್ ಪೂಂಜ ಶಾಸಕರು ನಡೆಸಲಿದ್ದಾರೆ. ಅಧ್ಯಕ್ಷತೆಯನ್ನು ಗೋಪಾಲಕೃಷ್ಣ ಕೆ., ಆಡಳಿತ ನಿರ್ದೇಶಕರು, ಬೆನಕ ಹೆಲ್ತ್ ಸೆಂಟರ್, ಉಜಿರೆ ವಹಿಸಲಿದ್ದಾರೆ.
ಅಂತೋನಿ ಫೆರ್ನಾಂಡಿಸ್, ಅಧ್ಯಕ್ಷರು, ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಪಡಂಗಡಿ, ವಸಂತ ಪೂಜಾರಿ ಅಧ್ಯಕ್ಷರು ಗ್ರಾಮ ಪಂಚಾಯತ್ ಪಡಂಗಡಿ, ಸುಬ್ರಹ್ಮಣ್ಯ ಭಟ್, ಅಧ್ಯಕ್ಷರು (ಪ್ರಭಾರ) ಹಾಲು ಉತ್ಪಾದಕರ ಸಹಕಾರ ಸಂಘ, ನರೇಂದ್ರ ಕುಮಾರ್ ಜೈನ್, ಉಪಾಧ್ಯಕ್ಷರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ, ಸಂತೋಷ್ ಕುಮಾರ್ ಜೈನ್ ಸದಸ್ಯರು ಗ್ರಾಮ ಪಂಚಾಯತ್ ಪಡಂಗಡಿ, ಸುಕೇಶಿನಿ ಎ., ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ, ಮೇಬಲ್ ಕ್ರಾಸ್ತಾ ಕಾರ್ಯದರ್ಶಿ ಹಾಲು ಉತ್ಪಾದಕರ ಸಹಕಾರ ಸಂಘ ಉಪಸ್ಥಿತಿರಿರುವರು.
ಪಾಲ್ಗೊಳ್ಳುವ ತಜ್ಞ ವೈದ್ಯರು: ಸಾಮಾನ್ಯ ಆರೋಗ್ಯ ಹಾಗೂ ತುರ್ತು ಚಿಕಿತ್ಸಾ ತಜ್ಞರು – ಡಾ| ಅದಿತ್ಯ ರಾವ್, MBBS, DNB (ಫಿಸಿಶಿಯನ್) ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು – ಡಾ| ಅಂಕಿತ ಜಿ. ಭಟ್, MBBS, M.S, DNB, OG FMIS, ಎಲುಬು-ಕೀಲು ತಜ್ಞರು – ಡಾ| ರೋಹಿತ್ ಜಿ. ಭಟ್, MBBS, MS (Ortho) Hand & Microsurgery, ಮಕ್ಕಳ ತಜ್ಞರು – ಡಾ| ಗೋವಿಂದ ಕಿಶೋರ್, MBBS, DCH, DNB (PEO).