
ಮಚ್ಚಿನ: ಶ್ರೀ ವಿದ್ಯಾಸಾಗರ್ ಸಿ. ಬಿ. ಎಸ್. ಇ ಶಾಲೆಯಲ್ಲಿ ಕಲಾ ಚೈತನ್ಯ ಶಾಲಾ ವಾರ್ಷಿಕೋತ್ಸವ ಜ. 31ರಂದು ನಡೆಯಿತು. ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಹರ್ಷ ಸಂಪಿಗೆತ್ತಾಯ ದೀಪ ಬೆಳಗಿಸಿ ಉದ್ಘಾಟಿಸಿದರು.
ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ ಮಾತನಾಡಿ ಮಕ್ಕಳನ್ನು ಒಂದು ಪೆನ್ಸಿಲ್ ಗೆ ಹೋಲಿಸಬಹುದು. ಯಾಕೆಂದರೆ ವಿದ್ಯಾರ್ಥಿಗಳ ಬದುಕು ಅಷ್ಟೇ ಎಷ್ಟೇ ಕೆತ್ತಿದರು, ಎಷ್ಟೇ ಚೂಪು ಮಾಡಿದರು ಅದು ನನ್ನನ್ನು ತಿದ್ದಿಕೊಳ್ಳುವುದಕ್ಕೋಸ್ಕರ ಎಂದು ನಾವು ಅರಿತುಕೊಳ್ಳಬೇಕು.

ಬಳ್ಳಮಂಜದ ಹೆಸರು ದೆಹಲಿಯಲ್ಲಿ ಇರಬೇಕಾದರೆ ಈ ಸಂಸ್ಥೆಯ ಪರಿಶ್ರಮ ಬಹಳಷ್ಟು ಇದೆ ಎಂದರು. ಸಭಾ ಕಾರ್ಯಕ್ರಮದ ಅಧ್ಯಕ್ಷ ಶಾಲಾ ಪ್ರೆಸಿಡೆಂಟ್ ವೆಂಕಟರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಜಯಂತ್ ಶೆಟ್ಟಿ ಅಧ್ಯಕ್ಷರು ವರ್ತಕರ ಸಂಘ ಮಡoತ್ಯಾರ್, ಸುಧೀರ್ ಶೆಟ್ಟಿ ಕೋರಬೆಟ್ಟು, ತುಳಸಿದಾಸ್ ಫೈ ಕಾರ್ಯದರ್ಶಿ ವರ್ತಕರ ಸಂಘ ಮಡಂತ್ಯಾರ್, ನಾರಾಯಣ ಪೂಜಾರಿ ಅಧ್ಯಕ್ಷರು ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಬಳ್ಳಮಂಜ, ಶ್ರೀಧರ ಪೂಜಾರಿ ಅಟ್ಲಾ ಉಪಾಧ್ಯಕ್ಷ ಕೃಷಿ ಪತ್ತಿನ ಸಹಕಾರಿ ಸಂಘ ಮಚ್ಚಿನ ವಿಶ್ವನಾಥ ನಡೀಬೇಟು, ಸುನಿಲ್ ಬಾಳಿಗ ವೀರ ಕೇಸರಿ ಫ್ರೆಂಡ್ಸ್ ಬಳ್ಳಮಂಜ ಉಪಸ್ಥಿತರಿದ್ದರು.
ಶಾಲಾ ಸಮಗ್ರ ಪ್ರಶಸ್ತಿಯನ್ನು ಪಡೆದ ಸಮೃದ್ ಇವರಿಗೆ ಸನ್ಮಾನಿಸಲಾಯಿತು. 2024 ಎಸ್.ಎಸ್.ಎಲ್. ಸಿ ಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿ ಪಲ್ಲವಿರನ್ನು ಗೌರಿಸಲಾಯಿತು. ಪೋಷಕರ ಹಾಗೂ ವಿದ್ಯಾರ್ಥಿಗಳ ಆಟೋಟ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜಾನ್ವಿತ ಸ್ವಾಗತಿಸಿದರು. ಶಾಲಾ ಪ್ರಾಂಶುಪಾಲರು ವರ್ಷರೆಡ್ಡಿ ಸ್ವಾಗತಿಸಿ, ಧನ್ಯವಾದ ಕೋರಿದರು. ✍️ ವರದಿ: ಹರ್ಷ ಬಳ್ಳಮಂಜ