

ಬೆಳ್ತಂಗಡಿ: ಶ್ರೀ ದುರ್ಗಾಪರಮೇಶ್ವರಿ ನವಗುಳಿಗ ಕ್ಷೇತ್ರ ಬರ್ಕಜೆ ನಿಟ್ಟಡೆ ವೇಣೂರು ಇದರ ಜಾತ್ರಾ ಮಹೋತ್ಸವದ ಪ್ರಯುಕ್ತ ಹಗ್ಗಜಗ್ಗಾಟ ಪಂದ್ಯಾಟವನ್ನು ಫೆ. 2 ರಂದು ಅಯೋಜಿಸಲಾಗಿದೆ.
ಪಂದ್ಯಾಟದ ಉದ್ಘಾಟನೆಯನ್ನು ಬರ್ಕಜೆ ಕ್ಷೇತ್ರದ ಧರ್ಮದರ್ಶಿಗಳು ನೇರವೆರಿಸಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶಾಸಕ ಹರೀಶ್ ಪೂಂಜ ಸೇರಿದಂತೆ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ.
ಫೆ. 4 ಹಾಗೂ 5ರಂದು 10 ನೇ ವರ್ಷದ ಜಾತ್ರಾ ಮಹೋತ್ಸವದ ವಿಜೃಂಭಣೆಯಿಂದ ನಡೆಯಲಿದೆ. 5 ರಂದು ಕ್ಷೇತ್ರದ ಪರಿವಾರ ದೈವಗಳಿಗೆ ಗಗ್ಗರ ಸೇವೆ ಸೇರಿದಂತೆ 9 ಗುಳಿಗ ದೈವಗಳಿಗೆ ವಿಶೇಷ ಗಗ್ಗರ ಸೇವೆ ನಡೆಯಲಿದೆ.