ಕಳೆಂಜ: ಜ. 26 ರಂದು ಕಾರ್ಯತ್ತಡ್ಕ ಮರಕಡದ ಸ. ಪ್ರೌ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಜೆ. ಸಿ. ಐ ಕೊಕ್ಕಡ ಕಪಿಲಾ ಘಟಕ ವತಿಯಿಂದ ಪರೀಕ್ಷಾ ಪೂರ್ವ ಸಿದ್ಧತೆ ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಯಿತು.
ಶಾಲೆಯ ಮುಖ್ಯಸ್ಥ ಯಾಕೂಬ್ ಎಸ್. ಕೊಯ್ಯುರು ಮೌಕಿಕವಾಗಿ ಉದ್ಘಾಟಿಸಿ ಶುಭ ಹಾರೈಸಿದರು. ಜೆ. ಸಿ. ಐ ಇಂಡಿಯಾದ ವಲಯ 15ರ ವಲಯ ತರಬೇತುದಾರರಾದ ಜೆ. ಎಫ್. ಡಿ ಶಂಕರ್ ರಾವ್ ನಿರಂತರ ಅಭ್ಯಾಸ ಮಾಡುವ ಮೂಲಕ ನಾವು ಯಾವುದೇ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಬಹುದು ಮತ್ತು ಹೇಗೆ ಪರೀಕ್ಷೆಗೆ ತಯಾರಾಗಬೇಕೆಂದು ತರಬೇತಿ ನೀಡಿದರು.
ಕಾರ್ಯಕ್ರಮದ ಯೋಜನೆ ನಿರ್ದೇಶಕರಾಗಿ ಜೆ. ಸಿ. ಯೋಗೀಶ್ ಗೌಡ ಸಿಂಬುಳು, ನಿಕಟ ಪೂರ್ವ ಅಧ್ಯಕ್ಷ ಜೆ. ಸಿ. ಸಂತೋಷ್ ಜೈನ್ ಉಪಸ್ಥಿತರಿದ್ದರು. ಜೆ. ಸಿ. ಅಕ್ಷತ್ ರೈ ಸಂಪನ್ಮೂಲ ವ್ಯಕ್ತಿಯನ್ನು ಸಭೆಗೆ ಪರಿಚಯಿಸಿದರು.
ಬೆಳ್ತಂಗಡಿಯ ಜೂನಿಯರ್ ಜೆ. ಸಿ. ವಿಭಾಗದ ನಿರ್ದೇಶಕ ಸಮನ್ವಿತ್, ಶಾಲಾ ಶಿಕ್ಷಕರು, ಮತ್ತು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜೆ. ಎಫ್. ಎಮ್. ಶ್ರೀದರ್ ರಾವ್ ನಿರೂಪಿಸಿ, ಜೆ. ಸಿ. ಶೋಭಾ ಪಿ. ಸ್ವಾಗತಿಸಿ, ಜೆ. ಜೆ. ಸಿ ಶ್ರವಣ್, ಜೆ. ಸಿ. ವಾಣಿ ವಾಚಿಸಿದ ಕಾರ್ಯಗಾರವನ್ನು ಜೆ. ಸಿ. ಪ್ರಜ್ವಲ್ ವಂದಿಸಿದರು.