ಧರ್ಮಸ್ಥಳ: ಘಟಕದಲ್ಲಿ ಜ. 26 ರಂದು ಇಂಧನ ಮಾಸಿಕ ಆಚರಣೆ, ರಾಷ್ಟ್ರೀಯ ರಸ್ತೆ ಸುರಕ್ಷತಾ ಆಚರಣೆ ಹಾಗೂ ಚಾಲಕರ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಧರ್ಮಸ್ಥಳದ ಠಾಣಾಧಿಕಾರಿ ಕಿಶೋರ್ ಹಾಗೂ ಕಾರ್ಯಕ್ರಮದ ಅಧ್ಯಕ್ಷರಾಗಿ ವಿಭಾಗೀಯ ಯಾಂತ್ರಿಕ ಅಭಿಯಂತರರು ಹಾಗೂ ಧರ್ಮಸ್ಥಳ ಘಟಕದ ಘಟಕ ವ್ಯವಸ್ಥಾಪಕರು ಗಣ್ಯರಾಗಿ ಭಾಗವಹಿಸಿದ್ದು, ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟನೆಗೊಂಡ ಕಾರ್ಯಕ್ರಮದಲ್ಲಿ ಘಟಕದ ಘಟಕ ವ್ಯವಸ್ಥಾಪಕ ಸುಂದರ ಎನ್. ಕಾರ್ಯಕ್ರಮಕ್ಕೆ ಬಂದಂತಹ ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣವನ್ನು ಮಾಡಿದರು.
ಘಟಕದ ಎಲ್ಲಾ ಚಾಲಕ ನಿರ್ವಾಹಕರನ್ನು ಪುಷ್ಪವನ್ನು ನೀಡುವುದರ ಮೂಲಕ ಅಭಿನಂದಿಸಲಾಯಿತು. ರೋಷನ್ ಪ್ರಶಾಂತ ವಾಲ್ಟರ್ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಕಮಲ್ ರಾಜ್ ಸಹಾಯಕ ಕಾರ್ಯಾಧ್ಯಕ್ಷರು, ಧರ್ಮಸ್ಥಳ ಘಟಕರವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಧನ್ಯವಾದ ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಪೂರ್ಣವಿರಾಮ ಇಡಲಾಯಿತು.