ಕೊಯ್ಯೂರು: ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರಿ ಭಾರತಿ ಬೆಂಬಲಿತ ಅಭ್ಯರ್ಥಿಗಳು 7 ಸ್ಥಾನವನ್ನು ಪಡೆದು ಜಯ ಸಾಧಿಸಿದರೆ.ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 5 ಸ್ಥಾನಗಳನ್ನು ಪಡೆದಿದ್ದಾರೆ.
ಸಹಕಾರಿ ಭಾರತಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಅಶೋಕ್ ಕುಮಾರ್, ದಾಮೋದರ ಗೌಡ, ಕೇಶವ ಪೂಜಾರಿ, ರವೀಂದ್ರನಾಥ್ ಪಿ., ಪುರುಷೋತ್ತಮ, ಕುಸುಮಾವತಿ, ಶೋಭಾ ವಿಜಯಿಯಾದರು.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಉಜ್ವಲ್ ಕುಮಾರ್, ನವೀನ್ ಕುಮಾರ್, ಪರಮೇಶ್ವರ ಗೌಡ, ಯತೀಶ್, ಸಂಜೀವ ಮಲೆಕುಡಿಯ ವಿಜಯಿಯಾದರು.
ಚುನಾವಣಾಧಿಕಾರಿಯಾಗಿ ಪ್ರತಿಮಾ ಚುನಾವಣೆ ಪ್ರಕ್ರಿಯೆ ನಡೆಸಿದರು.ಕೊಯ್ಯೂರು ಬ್ಯಾಂಕಿನ ಸಿ.ಇ.ಒ ಅನಂತಕೃಷ್ಣ ಹಾಗೂ ಸಿಬ್ಬಂದಿಗಳು ಸಹಕರಿಸಿದರು.
ಫಲಿತಾಂಶ ಘೋಷಣೆಗೆ ಕೋರ್ಟ್ ತಡೆಯಿರುವುದರಿಂದ ಕೋರ್ಟ್ ತೀರ್ಪಿನ ಬಳಿಕ ಘೋಷಣೆಯಾಗಲಿದೆ.