ಮಡಂತ್ಯಾರು: 75ನೇ ವರ್ಷದ ಸಂಭ್ರಮದಲ್ಲಿ ನೂತನ್ ಕ್ಲೋತ್ ಸೆಂಟರ್ ಲಕ್ಕಿ ಕೂಪನ್ ಡ್ರಾ ಕಾರ್ಯಕ್ರಮ ಜ. 25 ರಂದು ನಡೆಯಿತು.
1949 ರಲ್ಲಿ ಪ್ರಾರಂಭಗೊಂಡು 75 ವರ್ಷಾಚರಣೆಯಲ್ಲಿರುವ ಮಡಂತ್ಯಾರಿನ ನೂತನ್ ಕ್ಲೋತ್ ಸೆಂಟರ್ ಅತ್ಯುತ್ತಮ ಗುಣಮಟ್ಟದ ವಸ್ತ್ರ, ಮಿತದರ ವೈಶಿಷ್ಟಕ್ಕೆ ಹೆಸರುವಾಸಿಯಾಗಿದ್ದು,
ನ.1ರಿಂದ ಪ್ರತಿ 3000 ರೂ. ಮೊತ್ತದ ಖರೀದಿಗೆ ಒಂದು ಲಕ್ಕಿ ಕೂಪನ್ ಉಚಿತ ಪಡೆಯುವ ಅವಕಾಶ, ಪ್ರಥಮ ಬಹುಮಾನ 10 ಗ್ರಾಂ ಚಿನ್ನದ ನಾಣ್ಯ, ದ್ವಿತೀಯ ಬಹುಮಾನ ಟಿ.ವಿ.ಎಸ್. ಜುಪಿಟರ್, ತೃತೀಯ 5 ಗ್ರಾಂ. ಚಿನ್ನದ ನಾಣ್ಯ ಹಾಗೂ 75 ಸಮಾಧಾನಕರ ಬಹುಮಾನ ಡ್ರಾ ನಡೆಯಿತು. ಬಹುಮಾನ ವಿತರಣೆ ಫೆ. 4 ರಂದು ನಡೆಯಲಿದೆ.
ನೂತನ್ ಸಂಸ್ಥೆಯ ದಿ. ಜೆ. ಎಂ. ರೊಡ್ರಿಗಸ್ ಕಳೆದ 75 ವರ್ಷಗಳ ಹಿಂದೆ ಪ್ರಾರಂಭಿಸಿ ನಂತರ ತಂದೆ ವಿ. ಎಂ. ರೊಡ್ರಿಗಸ್ ಮುನ್ನಡೆಸಿ ಇದೀಗ ರಾಜೇಶ್ ರೊಡ್ರಿಗಸ್ ಪ್ರಕಾಶ್ ರೊಡ್ರಿಗಸ್ ಸೇರಿಕೊಂಡು ಮುನ್ನಡೆಸಿಕೊಂಡು ಬರುತ್ತಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಡಂತ್ಯಾರು ಪುಂಜಾಲಕಟ್ಟೆ ವರ್ತಕರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ, ಬೇಬಿ ಫೈನಾನ್ಸ್ ಮಾಲಕ ಯೋಗೇಶ್ ಕಡ್ತಿಲ, ಎಂ. ಆರ್. ಸುಪಾರಿ ಮಾಲಕ ಹೈದರ್ ಬಿ. ಮುಖ್ಯಮಂತ್ರಿಯವರ ಅಪಾರ ಕಾರ್ಯದರ್ಶಿ ಅರುಣ್ ಪುಟರ್ಡೊ, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಜೆರಾಲ್ಡ್ ಮೊರಾಸ್, ಕಾರ್ಯದರ್ಶಿ ನೆಲ್ಸನ್ ಲಸ್ರಾದೊ, ಮಡಂತ್ಯಾರು ಪ್ರಕಾಶ್ ಎಲೆಕ್ಟ್ರಾನಿಕ್ಸ್ ಮಾಲಕ ಎಡ್ವಿನ್ ಡಯಸ್ ನವಜ್ಯೋತಿ ಗೋಲ್ಡ್ ಮಾಲಕ ಶಶಿಧರ್ ಆಚಾರ್ಯ, ಮಹಾವೀರ ಮೆಡಿಕಲ್ ಮಾಲಕ ಉದಯ ಕುಮಾರ್ ಜೈನ್, ವೆಲ್ರಿನ್ ರೊಡ್ರಿಗಸ್, ರಾಜೇಶ್ ರೊಡ್ರಿಗಸ್, ಪ್ರಕಾಶ್ ರೊಡ್ರಿಗಸ್, ಲೊಲಿಟಾ ರೊಡ್ರಿಗಸ್, ಮ್ಯೂರಲ್ ರೊಡ್ರಿಗಸ್, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.