ಬೆಳ್ತಂಗಡಿ: ಡಿ. ಕೆ. ಆರ್. ಡಿ. ಎಸ್ ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರದ ನೇತೃತ್ವದಲ್ಲಿ ಜ. 25 ರಂದು ಹೆಚ್.ಐ.ವಿ/ಏಡ್ಸ್ ಸೋಂಕಿತ ಹಾಗೂ ಬಾಧಿತ ವ್ಯಕ್ತಿಗಳ ಮಾಸಿಕ ಬೆಂಬಲ ಸಭೆ ಮತ್ತು ಮಾಹಿತಿ ಕಾರ್ಯಕ್ರಮವು ಸಾಂತೋಮ್ ಟವರ್ ನಲ್ಲಿ ಆಯೋಜಿಸಲಾಗಿತ್ತು. ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ವೈದ್ಯ ಡಾ. ಮೋಹಿನಿದ್ದೀನ್ ನವಾಜ್ ಎಂ. ಬಿ. ಬಿ. ಎಸ್ ಆಗಮಿಸಿ, ನಾವು ಆತ್ಮವಿಶ್ವಾಸ ಮತ್ತು ಒಗ್ಗಟ್ಟಿನಿಂದ ಕಳಂಕ ತಾರತಮ್ಯದ ವಿರುದ್ಧ ಹೋರಾಡಬೇಕೆಂದು ಮಾತನಾಡಿ, ಪೌಷ್ಟಿಕ ಆಹಾರದ ಕಿಟ್ ವಿತರಿಸಿದರು. ಗಂಡಿಬಾಗಿಲು ಕಾರುಣ್ಯ ಸಂಘ, ಸಂಜಯ ನಗರದ ದೇವಿ ಸಂಘ ಮತ್ತು ನಂದಾದೀಪ ಸ್ವಸಹಾಯ ಸಂಘದ ಸದಸ್ಯರ ನೇತೃತ್ವದಲ್ಲಿ ಪೌಷ್ಟಿಕ ಆಹಾರದ ಕಿಟ್ ವಿತರಿಸಿ, 14000/- ವನ್ನು ನವಜೀವನ ಆರೈಕೆ ಹಾಗೂ ಬೆಂಬಲ ಕಾರ್ಯಕ್ರಮಕ್ಕೆ ನೀಡಿದರು.
ಸ್ವಸಹಾಯ ಸಂಘ ಸದಸ್ಯೆ ಮೇರಿ ಇವತ್ತಿನ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಹರಿಣಾಕ್ಷಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಿ. ಕೆ. ಆರ್. ಡಿ. ಎಸ್ ಸಂಸ್ಥೆಯ ನಿರ್ದೇಶಕ ಫಾ. ಬಿನೋಯಿ ಎ. ಜೆ.
ಪ್ರಾಸ್ತವಿಕ ನುಡಿಯನ್ನಾಡಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ನಂದಾದೀಪ ಸ್ವಸಹಾಯ ಸಂಘದ ಪ್ರತಿನಿಧಿಯಾಗಿ ಮಂಜುಳಾ ಜೋನ್ ಮತ್ತು ದೇವಿ ಸಂಘದ ಪ್ರತಿನಿಧಿಯಾಗಿ ವೈಶಾಲಿ ಉಪಸ್ಥಿತರಿದ್ದರು. ನವಜೀವನ ಆರೈಕೆ ಬೆಂಬಲ ಕಾರ್ಯಕ್ರಮದ ಸದಸ್ಯರು ಹಾಡು ಹಾಡಿದರು. ನವ ಜೀವನ ಬೆಂಬಲ ಕಾರ್ಯಕ್ರಮದ ಸದಸ್ಯೆ ಪುಷ್ಪ ಪ್ರಾರ್ಥನೆ ಹಾಡಿದರು.
ಡಿ. ಕೆ. ಆರ್. ಡಿ. ಎಸ್ ಸಂಸ್ಥೆಯ ವಿದ್ಯಾನಿಧಿ ಸಂಯೋಜಕಿ ಶ್ರೀಮತಿ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕರ್ತರು ಜೋನ್ಸನ್ ಎಲ್ಲರನ್ನು ವಂದಿಸಿದರು. ಕಾರ್ಯಕರ್ತರು ಮಾರ್ಕ್ ಡಿ ಸೋಜ ಕಾರ್ಯಕ್ರಮ ನಿರೂಪಿಸಿದರು. ಗಂಡಿಬಾಗಿಲು ಕಾರುಣ್ಯ ಸ್ವಸಹಾಯ ಸಂಘದ ಸದಸ್ಯರು ನವಜೀವನ ಆರೈಕೆ ಹಾಗೂ ಬೆಂಬಲ ಕಾರ್ಯಕ್ರಮದ ಸದಸ್ಯರಿಗೆ ಹಣ್ಣು ಹಂಪಲುಗಳನ್ನು ವಿತರಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.