

ಮುಂಡಾಜೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿ ಚುನಾವಣೆಯಲ್ಲಿ 11 ಸಹಕಾರ ಭಾರತಿಯ ಅಭ್ಯರ್ಥಿಗಳು ಹಾಗೂ 1 ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದಾರೆ.

ಸಹಕಾರ ಭಾರತಿಯ ಅಭ್ಯರ್ಥಿ ಗಳಲ್ಲಿ ಪ್ರಕಾಶ್ ನಾರಾಯಣ ರಾವ್, ರವಿ ಪೂಜಾರಿ, ರಾಘವ ಗೌಡ ಕುಡುಮಡ್ಕ, ಕಜೆ ವೆಂಕಟೇಶ್ವರ ಭಟ್, ಅಜಯ್ ಕಲ್ಲಿಕಾಟ್ ಆಂಟನಿ, ಅಶ್ವಿನಿ ಹೆಬ್ಬಾರ್, ಮೋಹಿನಿ, ಎಂ. ಶಶಿಧರ್ ಕಲ್ಮಂಜ, ಶಿವಪ್ರಸಾದ್ ಗೌಡ ದೇವಸ್ಯ, ರಾಘವ ಕಲ್ಮಂಜ, ಚೆನ್ನಕೇಶವ ಅರಸ ಮಜಲು. ಪಕ್ಷೇತರ ಸುಮಾ ಎಂ. ಗೋಖಲೆ ಜಯ ಸಾಧಿಸಿದ್ದಾರೆ.
ಫಲಿತಾಂಶದ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.