

ಮೊಗ್ರು: ಜ. 19 ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ರಿ. ಅಲೆಕ್ಕಿ, ಮುಗೇರಡ್ಕ 25ನೇ ವರ್ಷದ ಪ್ರಯುಕ್ತ ರಜತ ಸಂಭ್ರಮದ ಪ್ರಯುಕ್ತ ಫೆ 14,15 ರಂದು ನಡೆಯುವ ರಜತ ಪಥ (ಸವಿ ಮೆಲುಕಿನ ಸಂಭ್ರಮ ಮತ್ತು ಸಾಂಸ್ಕೃತಿಕ ಕಲರವ) ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮನ್ನು ಶ್ರೀ ಕ್ಷೇತ್ರ ಮುಗೇರಡ್ಕದಲ್ಲಿ ಆಡಳಿತ ಮೋಕ್ತೇಸರ ರಾಮಣ್ಣ ಗೌಡ ದೇವಸ್ಯ ಮತ್ತು ಆಡಳಿತ ಮೋಕ್ತೇಸರ ಮನೋಹರ್ ಗೌಡ ಅಂತರ ಬಿಡುಗಡೆಗೊಳಿಸಿದರು.
ವಕೀಲ ರಾಮಚಂದ್ರ ಗೌಡ, ಬೆಳ್ತಂಗಡಿ, ಹಿರಿಯರಾದ ಕೃಷ್ಣಪ್ಪ ಗೌಡ ನೈಮಾರು, ಉಮೇಶ್ ಗೌಡ ಪರಕ್ಕಾಜೆ, ಸಾಂತಪ್ಪ ಗೌಡ ನೆಕ್ಕರಾಜೆ, ಬಾಬು ಗೌಡ ಮುಗೇರಡ್ಕ ಹಾಗೂ ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರು, ಕಾರ್ಯಧರ್ಶಿ, ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷರು, ಕಾರ್ಯಧರ್ಶಿ ಮತ್ತು ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.