

ಕೊಕ್ಕಡ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಚುನಾವಣೆ ಹಿನ್ನೆಲೆ ಸಹಕಾರ ಭಾರತಿ ಕಾರ್ಯಕರ್ತರ ಸಭೆ ಶ್ರೀರಾಮ ಸೇವಾ ಮಂದಿರದಲ್ಲಿ ನಡೆಯಿತು.
ಕೊಕ್ಕಡ ಪ್ರಾ. ಕೃ. ಪ. ಸ ಸಂಘದ ನಿಕಟಪೂರ್ವ ಉಪಾಧ್ಯಕ್ಷ ಈಶ್ವರ ಭಟ್ ಹಿತ್ತಿಲು ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜಾ, ಚುನಾವಣಾ ಪ್ರಭಾರಿ ಧರ್ಮಸ್ಥಳ ಪ್ರಾ. ಕೃ. ಪ. ಸ. ಸಂಘದ ಅಧ್ಯಕ್ಷ ಪ್ರೀತಮ್, ಸೌತಡ್ಕ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೃಷ್ಣ ಭಟ್, ಧರ್ಮಸ್ಥಳ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹರೀಶ್ ಕೊಯ್ಲಾ, ಕಾರ್ಯದರ್ಶಿ ಗಣೇಶ್ ಕೆ ಹೊಸ್ತೋಟ, ಸಹಕಾರ ಭಾರತಿ ತಾಲೂಕು ಅಧ್ಯಕ್ಷ ವೆಂಕಪ್ಪಯ್ಯ, ಕೊಕ್ಕಡ ಪಂಚಾಯತ್ ಅಧ್ಯಕ್ಷೆ ಬೇಬಿ, ಕೊಕ್ಕಡ ಪ್ರಾ. ಕೃ. ಪ. ಸ. ಸಂಘದ ನಿಕಟ ಪೂರ್ವ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಕೊಕ್ಕಡ ಶಕ್ತಿ ಕೇಂದ್ರದ ಅಧ್ಯಕ್ಷ ಪ್ರಶಾಂತ ಪೂವಾಜೆ, ಕೊಕ್ಕಡ ಗ್ರಾಮ ಪಂಚಾಯತ್ ನಿಕಟ ಪೂರ್ವಧ್ಯಕ್ಷ ಯೋಗೀಶ್ ಆಳಂಬಿಲ, ತಾಲೋಕ್ ಎಸ್. ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಠಲ್ ಕುರ್ಲೆ, ಪಟ್ರಮೆ ಪಂಚಾಯತ್ ಅಧ್ಯಕ್ಷ ಮನೋಜ್ ಕುಮಾರ್ ಪುರಂದರ ಕಡೀರ, ಮತ್ತು ಅಭ್ಯರ್ಥಿಗಳು ಉಪಸ್ಥಿತರಿದ್ದರು.

ನಾಮ ಪತ್ರಿಕೆ ಸಲ್ಲಿಕೆಯ ಅದ್ದೂರಿ ಮೆರವಣಿಗೆ: ಸಹಕಾರ ಭಾರತಿಯಿಂದ ಸಾಮಾನ್ಯ ಕ್ಷೇತ್ರದಿಂದ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿರುವ ಕುಶಾಲಪ್ಪ ಗೌಡ ಪೂವಾಜೆ, ವಿಠಲ ಬಂಡಾರಿ, ಶ್ರೀನಾಥ್ ಬಡೆ ಕೈಲು, ಪದ್ಮನಾಭ ಕಾಯಿಲ ಉದಯ ಕುಮಾರ್ ಅನಾರು, ಮಹಾಬಲ ಶೆಟ್ಟಿ ಪಟ್ಟೂರು, ಹಿಂದುಳಿದ ವರ್ಗದ ಎ ಕ್ಷೇತ್ರದ ಅಭ್ಯರ್ಥಿ ಸುನೀಲ್ ಕೊಲ್ಲಾಜೆ, ಹಿಂದುಳಿದ ವರ್ಗ ಬಿ ಕ್ಷೇತ್ರದ ಅಭ್ಯರ್ಥಿ ರವಿಚಂದ್ರ ಪುಡ್ಕೆತ್ತೂರು, ಮಹಿಳಾ ಕ್ಷೇತ್ರದ ಅಭ್ಯರ್ಥಿಗಳಾದ ಪ್ರೇಮವತಿ ಕಲ್ಲಾಜೆ, ಅಶ್ವಿನಿ ರವಿ ನಾಯ್ಕ್ ಓಣಿತ್ತಾರು, ಪರಿಶಿಷ್ಟ ಜಾತಿ ಅಭ್ಯರ್ಥಿ ಮುತ್ತಪ್ಪ ಕೊಕ್ಕಡ, ಪರಿಶಿಷ್ಟ ಪಂಗಡ ಅಭ್ಯರ್ಥಿ ವಿಶ್ವನಾಥ್ ಕುಕ್ಕುದೋಲಿ ಇವರೆಲ್ಲರೂ ಅದ್ದೂರಿ ಮೆರವಣಿಗೆಯ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು.
ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಯೋಗೀಶ್ ಆಳಂಬಿಲ, ಸ್ವಾಗತವನ್ನು ಕುಶಾಲಪ್ಪ ಗೌಡ ಪೂವಾಜೆ, ಧನ್ಯವಾದವನ್ನು ಪಂಚಾಯತ್ ಸದಸ್ಯೆ ಲತಾ ನೆರವೇರಿಸಿದರು.