

ಕಳೆoಜ: ಭಾರತದ ವೈಭವವನ್ನು ಜಗತ್ತಿಗೆ ಪರಿಚಯಿಸಿದ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಜ.18 ರಂದು ಜೆ. ಸಿ. ಐ ಕೊಕ್ಕಡ ಕಪಿಲಾ ಘಟಕ ಹಾಗೂ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರಕಾರಿ ಪ್ರೌಢಶಾಲೆ ಶಾಲೆತ್ತಡ್ಕ ಸಹಯೋಗದೊಂದಿಗೆ. ಸುಸ್ಥಿರ ಭವಿಷ್ಯಕ್ಕಾಗಿ ಯುವಜನತೆ ಎಂಬ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಕಾರ್ಯಕ್ರಮದ ಉದ್ಘಾಟನೆಯನ್ನು ಜೆ. ಸಿ. ಐ ಇಂಡಿಯಾದ ವಲಯ15ರ ಕಮ್ಯೂನಿಟಿ ಡೆವಲಪ್ ಮೆಂಟ್ ನ ವಲಯ ನಿರ್ದೇಶಕ ಜೆ. ಎಫ್. ಡಿ ಕಾಶೀನಾಥ್ ಗೋಗಟೆ ಮತ್ತು ವೇದಿಕೆಯಲ್ಲಿದ್ದ ಅತಿಥಿಗಳು ಸ್ವಾಮಿ ವಿವೇಕಾನಂದರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಈ ಕಾರ್ಯಕ್ರಮ ಉದ್ಘಾಟಿಸಿದರು.

ಉದ್ಘಾಟಕರು ವಿವೇಕಾನಂದರ ಜಯಂತಿಯನ್ನು ರಾಷ್ಟ್ರೀಯ ಯುವ ದಿನ ಎಂದು ಆಚರಿಸುವ ಪ್ರಮುಖ ಕಾರಣ ಮತ್ತು ಜೆ. ಸಿ ಯ ಪ್ರಾಮುಖ್ಯತೆ, ಜೆ. ಸಿ. ಯಲ್ಲಿ ನಡೆಯುವ ಕಾರ್ಯಕ್ರಮ ಮತ್ತು ಜೆ. ಸಿ. ಐ ನಿಂದ ಆಗುವ ಪ್ರಯೋಜನವನ್ನು ತಿಳಿಸಿದರು.
ತರಬೇತಿಯ ಸಂಪನ್ಮೂಲ ವ್ಯಕ್ತಿಯಾಗಿರುವ ಧರ್ಮಸ್ಥಳ ಠಾಣೆಯ ಪಿ. ಎಸ್. ಐ ಕಿಶೋರ್ ಕುಮಾರ್ ಮಾದಕ ವಸ್ತುವಿನ ಮತ್ತು ಟ್ರಾಫಿಕ್ ನಿಯಮಗಳ ತರಬೇತಿಯನ್ನು ನೀಡಿದರು.
ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಎಚ್. ಎಸ್. ಶ್ರೀಕೃಷ್ಣ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಯುವಕರ ದಿನವಾಗಿ ಆಚರಿಸುವ ಪ್ರಮುಖ ಉದ್ದೇಶವನ್ನು ತಿಳಿಸಿದರು.
ಮುಖ್ಯ ಶಿಕ್ಷಕ ಪ್ರಭಾಕರ ಜಿ. ವಿವೇಕಾನಂದರ ಜೀವನ ಚರಿತ್ರೆಯನ್ನು ಸಭೆಗೆ ತಿಳಿಸಿದರು. ನಿರೀಕ್ಷಾ ವಿವೇಕಾನಂದರ ಆದರ್ಶಗಳ ವಿಷಯವಾಗಿ ಮಾತನಾಡಿದರು. ಶಾಲೆಯ ಮಕ್ಕಳು ಹಾಡಿನ ಮೂಲಕ ಸ್ವಾಮಿ ವಿವೇಕಾನಂದರಿಗೆ ನಮನ ಸಲ್ಲಿಸಿದರು.
ರಾಷ್ಟೀಯ ಯುವ ಜನತೆಯ ಪ್ರಯುಕ್ತ ಪ್ರಾಥಮಿಕ ಶಾಲಾ ಮಕ್ಕಳಿಗೆ ಜೆ. ಸಿ. ಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಪ್ರಬಂಧ ಸ್ಪರ್ಧೆ ಮತ್ತು ಪ್ರೌಢ ಶಾಲೆಯ ಮಕ್ಕಳಿಗೆ ಭಾಷಣ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು.
ಅತಿಥಿಗಳನ್ನು ಜೆ. ಸಿ. ಅಕ್ಷತ್ ರೈ ಮತ್ತು ಜೆ. ಸಿ. ಪ್ರೀಯಾ ಜೆ. ಅಮಿನ್ ಪರಿಚಯ ಮಾಡಿಕೊಟ್ಟರು.ಕಾರ್ಯಕ್ರಮದಲ್ಲಿ ಪ್ರೌಢ
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪದ್ಮನಾಭ ಗೌಡ ಮತ್ತು ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಶ್ ನಿಕಟಪೂರ್ವ ಅಧ್ಯಕ್ಷರಾಗಿರುವ ಜೆ. ಸಿ. ಸಂತೋಷ್ ಜೈನ್, ಮಾರ್ಗದರ್ಶಕ ಜೆ. ಸಿ. ಎಚ್. ಜಿ. ಎಫ್ ಜೋಸೆಫ್ ಪಿರೇರಾ, ಜೆ. ಸಿ ಎಚ್. ಜಿ. ಎಸ್. ಜೆಸಿಂತಾ ಡಿಸೋಜಾ, ಪೂರ್ವಧ್ಯಕ್ಷ ಜೆ. ಎಫ್. ಎಂ. ಶ್ರೀಧರ್ ರಾವ್ ಕೆ, ಜೆ. ಸಿ. ಕವಿತಾ, ಶಾಲಾ ಶಿಕ್ಷಕರು, ಮತ್ತು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜೆ. ಸಿ. ಯ ವಲಯ 15ರ ವಲಯ ಜೆ. ಸಿ ಸೆನ್ ಜಿತೇಶ ಪಿರೇರಾ ನಿರೂಪಿಸಿ, ಜೆ. ಸಿ. ಶೋಭಾ ಪಿ. ಸ್ವಾಗತಿಸಿ, ಜೆ. ಸಿ. ಶ್ರಾವಣ, ಜೆ. ಸಿ. ವಾಣಿ ವಾಚಿಸಿದರು. ಜೆ. ಸಿ. ಚಂದನ ಪಿ. ವಂದಿಸಿದರು.