ಸುಲ್ಕೇರಿ: ಕರ್ನಾಟಕ ಸರಕಾರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮ ಪಂಚಾಯತ್ ವತಿಯಿಂದ ನಡೆದ ಗ್ರಾಮ ಸಭೆಯಲ್ಲಿ ಆಮಂತ್ರಣ ಪರಿವಾರವನ್ನು ಗೌರವಿಸಲಾಯಿತು.
ಸಾಮಾಜಿಕ ಕೆಲಸದಲ್ಲಿ ತೊಡಗಿಕೊಂಡ ಪಂಚಾಯತ್ ವ್ಯಾಪ್ತಿಯ ಸಂಸ್ಥೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಈ ಗೌರವ ದೊರಕಿದೆ.
ರಾಜ್ಯ ಮಟ್ಟದಲ್ಲಿ ಸಾಂಸ್ಕೃತಿಕ, ಸಾಹಿತ್ಯ, ಕ್ರೀಡಾ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ನೂರಾರು ಕಾರ್ಯಕ್ರಮಗಳನ್ನು ಆಯೋಜಿಸಿ 10 ವರ್ಷದ ಸಂಭ್ರಮದಲ್ಲಿರುವ ಆಮಂತ್ರಣ ಪರಿವಾರವನ್ನು ಗುರುತಿಸಲಾಯಿತು.
ಜತೆಗೆ ಸದ್ಧರ್ಮ ಯುವಕ ಮಂಡಲ ಕುದ್ಯಾಡಿ, ಲಯನ್ಸ್ ಕ್ಲಬ್ ಸುಲ್ಕೇರಿ ಹಾಗೂ ಪಂಪ್ ಅಪರೇಟ್ ಆಗಿ ನಿವೃತ್ತಿ ಹೊಂದಿದ ಸುಲ್ಕೇರಿ ಸಂಜೀವ ಶೆಟ್ಟಿರವರನ್ನು ಗೌರವಿಸಲಾಯಿತು.