ಧರ್ಮಸ್ಥಳ: ಕಟ್ಟಡ ಬೈಲ್ ನಿವಾಸಿ ಉಮೇಶ್ (40) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ. 16 ರಂದು ನಡೆದಿದೆ. ಕಳೆದ 3 ದಿನಗಳಿಂದ ಮನೆಗೆ ಬಾರದೆ ವ್ಯಕ್ತಿಯ ಶವ ಮನೆಯ ಬಾವಿಯಲ್ಲಿ ಜ. 16 ರಂದು ಪತ್ತೆಯಾಗಿದೆ. ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶವವನ್ನು ಶೌರ್ಯ ವಿಪತ್ತು ತಂಡದ ರವೀಂದ್ರ ಉಜಿರೆ, ನಳಿನ್ ಬೇಕಲ್, ಸ್ನೇಕ್ ಪ್ರಕಾಶ್, ಅರಸಿನಮಕ್ಕಿ – ಶಿಶಿಲ ಶೌರ್ಯ ವಿಪತ್ತು ಘಟಕದ ಅವಿನಾಶ್ ಭಿಡೆ ಮತ್ತು ರಮೇಶ್ ಬೈರಕಟ್ಟ ಸಹಕರಿಸಿದರು.