ನಡ: ಗ್ರಾಮ ಪಂಚಾಯತಿಯ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆಯು ಜ. 16 ರಂದು ನಡ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಉಪಾಧ್ಯಕ್ಷರಾಗಿ ಜಯ ಶೆಟ್ಟಿ ಬೊಲ್ಲೊಟ್ಟು ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಿವಾಕರ ಕರ್ಕೇರ ರಾಜೀನಾಮೆಯಿಂದ ಸದರಿ ಸ್ಥಾನವು ತೆರವಾಗಿತ್ತು. ಚುನಾವಣಾಧಿಕಾರಿಯಾಗಿ ಪೃಥ್ವಿ ಸಾನಿಕಂ, ಮಾನ್ಯ ತಹಶೀಲ್ದಾರರು, ತಾಲೂಕು ಕಛೇರಿ ಬೆಳ್ತಂಗಡಿ ಭಾಗವಹಿಸಿದರು. ಗ್ರಾ. ಪಂ ಅಧ್ಯಕ್ಷರು, ಸರ್ವಸದಸ್ಯರು, ಪಂ. ಅ. ಅಧಿಕಾರಿಗಳು, ಕಾರ್ಯದರ್ಶಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.