ಬೆನಕ ಆಸ್ಪತ್ರೆ ರಜತ ಸಂಭ್ರಮ – ಆಧುನಿಕ ತಂತ್ರಜ್ಞಾನದ ವಿಸ್ತ್ರತ ನೂತನ ಕಟ್ಟಡ – ಪತ್ರಿಕಾಗೋಷ್ಠಿ

0

ಉಜಿರೆ: “ರೋಗಿಗಳ ಸೇವೆಗೆ ಕೇಂದ್ರೀಕೃತವಾಗಿ ಅತ್ಯುತ್ತಮ ದರ್ಜೆಯ ಆರೋಗ್ಯ ಶುಶೂಷೆಯನ್ನು ಎಲ್ಲರಿಗೂ ಕೈಗೆಟುಕುವ ದರದಲ್ಲಿ ಹಾಗೂ ಸಮುದಾಯದ ಆಶಯಗಳಿಗೆ ಅನುಗುಣವಾಗಿ ಒದಗಿಸುವ ಆಸ್ಪತ್ರೆಯಾಗಿ ಬೆಳೆಯಬೇಕು ಎಂಬುದು ನಮ್ಮ ಸಂಕಲ್ಪ” ಎಂದು ಬೆನಕ ಆಸ್ಪತ್ರೆಯ ಡಾ. ಗೋಪಾಲಕೃಷ್ಣ ಕೆ. ಹೇಳಿದರು.

ಬೆನಕ ಆಸ್ಪತ್ರೆಯ ರಜತ ಮಹೋತ್ಸವದ ಸಂಭ್ರಮದಲ್ಲಿದೆ. ವಿಸ್ತ್ರತ ನೂತನ ಕಟ್ಟಡ ಕಾಮಗಾರಿ ಕೂಡ ಮುಗಿದಿದ್ದು, ಉದ್ಘಾಟನೆ ಜ. 18 ರಂದು ನಡೆಯಲಿದೆ. ಈ ಪ್ರಯುಕ್ತ ಪತ್ರಿಕಾಗೋಷ್ಠಿ ನಡೆಸಿದ ಡಾ. ಗೋಪಾಲಕೃಷ್ಣ ಕೆ. “ಕೇವಲ 7 ಹಾಸಿಗೆಗಳ 2 ವೈದ್ಯರು ಹಾಗೂ 2 ದಾದಿಯರಿಂದ 2000 ರಲ್ಲಿ ಆರಂಭವಾದ ಬೆನಕ ಆಸ್ಪತ್ರೆ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ತನ್ನ ಸೇವೆಯನ್ನು ಹಂತ ಹಂತವಾಗಿ ವಿಸ್ತರಿಸುತ್ತಾ ಬಂದಿದೆ. ಸ್ಥಳೀಯ ಅಗತ್ಯಗಳನ್ನು ಮನಗಂಡು ಸಣ್ಣಮಟ್ಟದಲ್ಲಿ ಆರಂಭವಾದ ಆಸ್ಪತ್ರೆ ಇದೀಗ 130 ಹಾಸಿಗೆಗಳ ಮಲ್ಟಿ – ಸ್ಪೆಷಾಲಿಟಿ ಅರೋಗ್ಯ ಸೇವೆಗಳನ್ನೊಳಗೊಂಡ ಖ್ಯಾತ ಆಸ್ಪತ್ರೆಯಾಗಿ ಬೆಳೆದು ನಿಂತಿದೆ. ಗುಣಮಟ್ಟದ ಸಮಕಾಲೀನ ಆರೋಗ್ಯ ಸೇವೆಯನ್ನು ನೀಡುವ ಹಾಗೂ ಜನರ ಆಯ್ಕೆಯ ಆಸ್ಪತ್ರೆಯಾಗಿ ಹಂತ ಹಂತವಾಗಿ ಬೆಳೆಯುತ್ತಾ ಬಂದಿದ್ದೇವೆ. ಪ್ರತಿ ವರ್ಷ ಕೂಡ ಯಾವುದಾದರೊಂದು ಹೊಸ ಸೇವೆಯನ್ನು ಆರಂಭಿಸುತ್ತಾ ಬಂದಿದ್ದೇವೆ” ಎಂದು ಹೇಳಿದರು. ಬೆನಕ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಧಿಕಾರಿ ಎಸ್. ಜಿ. ಭಟ್ ಕಾರ್ಯಕ್ರಮ ನಿರೂಪಣೆ ಮಾಡಿದರು.

ಬೆನಕ ಆಸ್ಪತ್ರೆಯ ರಜತ ಸಂಭ್ರಮ ಕಾರ್ಯಕ್ರಮವನ್ನು ಸ್ಪೀಕರ್ ಯು. ಟಿ. ಖಾದರ್ ಉದ್ಘಾಟಿಸಲಿದ್ದು, ನೂತನ ಕಟ್ಟಡದ ಉದ್ಘಾಟನೆ ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೆರವೇರಿಸಲಿದ್ದಾರೆ. ಇದೇ ರೀತಿ ಬೇರೆ ಬೇರೆ ವಿಭಾಗಗಳು ಕ್ಯಾಪ್ಶನ್ ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜಾ, ಡಾ. ಯು. ಟಿ. ಇಫ್ತಿಕರ್ ಅಲಿ ಉದ್ಘಾಟಿಸಲಿದ್ದಾರೆ.

ಈ ಪತ್ರಿಕಾ ಗೋಷ್ಠಿಯಲ್ಲಿ ಡಾ. ಭಾರತಿ ಜಿ. ಕೆ., ಡಾ. ಆದಿತ್ಯ ರಾವ್, ಡಾ. ಅಂಕಿತ ಜಿ ಭಟ್, ಡಾ. ರೋಹಿತ್ ಜಿ. ಭಟ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here