ಜ. 23: ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಸಹಕಾರ ಸಂಘದ ಕಟ್ಟಡ ಉದ್ಘಾಟನೆ

0

p>

ಬೆಳ್ತಂಗಡಿ: 1997-1998ನೇ ಸಾಲಿನಲ್ಲಿ ಸುಮಾರು 604 ಸದಸ್ಯರನ್ನು ಒಳಗೊಂಡು ರೂ. 6 ಲಕ್ಷದಷ್ಟು ಪಾಲು ಬಂಡವಾಳದೊಂದಿಗೆ 1998 ಜನವರಿ 26 ರಂದು ”ಪರಸ್ಪರ ಸಹಕಾರ” ಎಂಬ ಧ್ಯೇಯವನ್ನು ಮುಂದಿಟ್ಟುಕೊಂಡು ಅಂದಿನ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಧ್ಯಕ್ಷ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೊಜರವರಿಂದ ಆರ್ಶೀವಚನಗೊಂಡು, ಅಂದಿನ ಬೆಳ್ತಂಗಡಿಯ ವಿದಾನಸಭಾ ಕ್ಷೇತ್ರದ ಶಾಸಕ ಕೆ. ವಸಂತ ಬಂಗೇರ ರಿಂದ ಉದ್ಘಾಟನೆಗೊಂಡು ಸುಮಾರು 4 ವರ್ಷಗಳ ಕಾಲ ಬೆಳ್ತಂಗಡಿಯ ಪಿಂಟೊ ಕಾಂಪ್ಲೆಕ್ಸ್‌ನಲ್ಲಿ ಎಲ್ಲರ ಸಹಕಾರದೊಂದಿಗೆ ವ್ಯವಹಾರ ನಡೆಸಿ ಜು. 7 2001 ರಂದು ಸುಮಾರು 1000 ಚ. ಅಡಿ ವಿಸ್ತ್ರಿರ್ಣಾದ ಸ್ವಂತ ಕಟ್ಟಡ ಸ್ಥಳವನ್ನು ಖರೀದಿಸಿ ಪ್ರಸ್ತುತ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಝಿಯವರಿಂದ ಆಶೀರ್ವಚನಗೊಂಡು ಸಹಕಾರ ಇಲಾಖೆಯ ಸಹಕಾರದಿಂದ, ಸದಸ್ಯರ ಹಾಗೂ ಗ್ರಾಹಕರ ಸಹಕಾರದಿಂದ ಕಾನೂನು ಸಲಹೆಗಾರರ ಸಲಹೆಯೊಂದಿಗೆ 2007 ರಲ್ಲಿ ನಾರವಿ ಶಾಖೆಯನ್ನೂ, 2012 ರಲ್ಲಿ ಅಳದಂಗಡಿ ಶಾಖೆಯನ್ನೂ ಹಾಗೂ 2021 ರಲ್ಲಿ ವೇಣೂರು ಶಾಖೆಯನ್ನೂ ತೆರೆದು ವ್ಯವಹರಿಸಲು ಅನೇಕ ಮಹನೀಯರು ಸಹಕರಿಸುತ್ತಾರೆ.

ನಮ್ಮ ಸಹಕಾರ ಸಂಘವು ಹತ್ತು ಹಲವು ಜನಪರ ಕೆಲಸಗಳನ್ನು ಕೈಗೊಂಡಿರುತ್ತದೆ. ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿವೇತನ, ಬಡವರಿಗೆ ಧನ ಸಹಾಯ, ವೈದಕೀಯ ನೆರವು, ಧಾರ್ಮಿಕ ಕೆಲಸಗಳಿಗೆ ಧನ ಸಹಾಯ ಮಾಡುತ್ತಿದ್ದು ಅನೇಕ ರೀತಿಯ ಕಡಿಮೆ ಬಡ್ಡಿ ದರದಲ್ಲಿ ಗ್ರಾಹಕರರಿಗೆ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಠೇವಣಿದಾರರಿಗೆ ಆಕರ್ಷಕ ಬಡ್ಡಿಯನ್ನು ನಿಡುತ್ತಿದ್ದೇವೆ. ಸಾಲ ವಸೂಲಾತಿಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಪ್ರಸ್ತುತ ನಮ್ಮ ಸಹಕಾರ ಸಂಘವು 2700 ಸದಸ್ಯರನ್ನು ಒಳಗೊಂಡು ರೂ.93 ಲಕ್ಷ/- ಪಾಲು ಬಂಡವಾಳ ಮೊತ್ತವನ್ನು ಸಂಗ್ರಹಿಸಿ ರೂ. 95 ಕೋಟಿ ಮೊತ್ತದ ಠೇವಣಿ ಸಂಗ್ರಹಿಸಿ ಅನೇಕ ನಿಧಿಗಳನ್ನು ಸ್ಥಾಪಿಸಿ 100 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ಒಟ್ಟು ಸಾಲ 80 ಕೋಟಿ ಹೊರಬಾಕಿ ಇರುತ್ತದೆ.

ಪ್ರತಿವರ್ಷವು ಲಾಭದಲ್ಲಿ ನಡೆಯುತ್ತಿದ್ದು ಕಳೆದ ಸಾಲಿನಲ್ಲಿ ಸರಿಸುಮಾರು 3 ಕೋಟಿ ಲಾಭಗಳಿಸಿರುತ್ತದೆ. ಬೆಳ್ಳಿಹಬ್ಬದ ಸವಿನೆನಪಿಗಾಗಿ ಕಳೆದ 3 ವರ್ಷದಿಂದ ಶೇಕಡಾ 25 ಪಾಲುಮುನಾಫೆಯನ್ನು ನೀಡುತ್ತಿದ್ದೇವೆ. ಪ್ರಸ್ತುತ ಸಂಘದಲ್ಲಿ ಅಧ್ಯಕ್ಷ ಹೆನ್ರಿ ಲೋಬೊ, ಉಪಾಧ್ಯಕ್ಷ ಡೇನಿಸ್ ಸಿಕ್ವೇರಾ, ನಿರ್ದೇಶಕ ಜೇಮ್ಸ್ ಡಿ ಸೋಜ, ಹೆರಾಲ್ಡ್ ಪಿಂಟೊ, ಜೋಸೆಫ್ ಪೀಟರ್ ಸಲ್ಡಾನ್ಹಾ, ಅಲ್ಫೋನ್ಸ್ ರೊಡ್ರೀಗಸ್, ವಿನ್ಸೆಂಂಟ್ ಪ್ರಕಾಶ್ ಪಿಂಟೊ, ತೋಮಸ್ ಆರ್. ನೊರೊನ್ಹಾ, ಪ್ರಸಾದ್ ಪಿಂಟೊ, ರಫಾಯಲ್ ವೇಗಸ್, ಪೌಲಿನ್ ರೇಗೊ, ಪ್ಲಾವಿಯ ಡಿಸೋಜ, ವಿನಯ್ ಜೋನ್ಸನ್ ಡಿ ಸೋಜ, ರಿಯೋ ಮೈಕಲ್ ರೊಡ್ರೀಗಸ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಐವನ್ ಗೊನ್ಸಾಲ್ವಿಸ್ ಹಾಗೂ ಸಿಬ್ಬಂದಿ ವರ್ಗದವರು ಉತ್ತಮ ಸೇವೆ ನೀಡುತ್ತಿದ್ದಾರೆ.

ಸಂಘವು ಸ್ವಂತ ಜಾಗ ಖರೀದಿಸಿ, ಕಟ್ಟಡ ನಿರ್ಮಿಸಿ ಇದೇ 23 ನೇ ಜ. 2025 ರಂದು ಬೆಳಿಗ್ಗೆ 10.30 ಗಂಟೆಗೆ ಎಲ್ಲಾ ಸೌಲಭ್ಯಗನ್ನೊಳಗೊಂಡ “ಆಶಾಕಿರಣ” ಎಂಬ ವಾಣಿಜ್ಯ ಸಂಕೀರ್ಣವು ಹೆನ್ರಿ ಲೋಬೊ ಅಧ್ಯಕ್ಷತೆಯಲ್ಲಿ ಹೋಲಿ ರಿಡೀಮರ್ ಚರ್ಚ್‌ನ ಪ್ರಧಾನ ಧರ್ಮಗರು ಫಾ. ವಾಲ್ಟರ್ ಡಿಮೆಲ್ಲೊ ಆಶೀರ್ವಚನದೊಂದಿಗೆ ಲೋಕಾರ್ಪಣೆಗೊಳ್ಳಲಿದೆ. ಉಧ್ಘಾಟಕರಾಗಿ ಹರೀಶ್ ಪೂಂಜ ಶಾಸಕರು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ, ರಕ್ಷಿತ್ ಶಿವರಾಂ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಎಚ್. ಎನ್. ರಮೇಶ್ ಸಹಕಾರ ಸಂಘಗಳ ಉಪನಿಬಂದಕರು ಮಂಗಳೂರು, ದ.ಕ., ಸಹಕಾರ ರತ್ನ ಅನಿಲ್ ಲೋಬೊ, ಅಧ್ಯಕ್ಷರು ಎಮ್‌. ಸಿ. ಸಿ ಬ್ಯಾಂಕ್ ಮಂಗಳೂರು, ಗೌರವ ಅತಿಥಿಗಳಾಗಿ ಎಸ್. ಎಮ್. ರಘು, ಸಹಕಾರ ಸಂಘಗಳ ಸಹಾಯಕ ನಿಬಂಧಕರು ಉಪವಿಭಾಗ ಪುತ್ತೂರು, ಪ್ರತಿಮಾ ಸಹಕಾರ ಅಭಿವೃದ್ಧಿ ಅಧಿಕಾರಿ ಬೆಳ್ತಂಗಡಿ, ಜಯಾನಂದ ಗೌಡ ಅಧ್ಯಕ್ಷರು ಪಟ್ಟಣ ಪಂಚಾಯತ್ ಬೆಳ್ತಂಗಡಿ, ಸೇವಿಯರ್ ಪಾಲೇಲಿ ನಿಕಟ ಪೂರ್ವ ಅದ್ಯಕ್ಷರು ಹಾಗೂ ನೋಟರಿ ವಕೀಲರು ಬೆಳ್ತಂಗಡಿ ಭಾಗವಹಿಸಲಿರುವರು.

LEAVE A REPLY

Please enter your comment!
Please enter your name here