p>
ಕೊಕ್ಕಡ: ಸಂಗಮ್ ಯುವಕ ಮಂಡಲ ಸರ್ವ ಸದಸ್ಯರ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯು ಜ.12 ರಂದು ಕೊಕ್ಕಡ ಯುವಕ ಮಂಡಲದ ಆವರಣದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಹಿರಿಯರಾದ ಕುಂಞಿಕಣ್ಣನ್ ವಹಿಸಿದ್ದರು. ಸಂಗಮ್ ಯುವಕ ಮಂಡಲ ಅಧ್ಯಕ್ಷ ರೂಪೇಶ್, ಹಿರಿಯರಾದ ಗಣೇಶ್ ದೇವಾಡಿಗ, ರಜಾಕ್ ದುಬೈ ಉಪಸ್ಥಿತರಿದ್ದರು. ಈ ಸಭೆಯಲ್ಲಿ ಯುವಕ ಮಂಡಲದ ಚಟುವಟಿಕೆಗಳ ಬಗ್ಗೆ ಚರ್ಚಿಸಿ, ನೂತನ ಪದಾಧಿಕಾರಿಗಳ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಎಸ್. ಕೆ. ಹಕೀಂ, ಉಪಾಧ್ಯಕ್ಷರಾಗಿ ಅವಿನಾಶ್ ಕೆ., ಆಸೀಫ್, ಸುನೀತ್ ಅಗರ್ತ, ದಯಾನೀಶ್, ರಜಾಕ್ ಐವಾನ್, ಕಾರ್ಯದರ್ಶಿಯಾಗಿ ಸುನಿಶ್ ನಾಯ್ಕ್, ಜೊತೆ ಕಾರ್ಯದರ್ಶಿಯಾಗಿ ಆನ್ಸರ್, ಕೋಶಾಧಿಕಾರಿಯಾಗಿ ಗಿರೀಶ್ ಶಬರಾಡಿ, ಸದಸ್ಯರಾಗಿ ಚೇತನ್. ಟಿ. ಎಲ್., ಶರೀಫ್ ಆಲ್ಫಾ, ಉಮರ್ ಬೈಲಂಗಡಿ, ಅಶ್ವಿನ್ ಸಾಲಿಯಾನ್, ಮಿಥಿಲೇಶ್, ಹಕೀಂ ಮುಂಡೇಲ್ ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು. ರಜಾಕ್ ಎಂ. ಎಚ್. ಸ್ವಾಗತಿಸಿದರು, ರಾಜಗೋಪಾಲ್ ಬೆನಕ ವಂದಿಸಿದರು.