ಶ್ರೀ ಧ. ಮ. ಆಂಗ್ಲ ಮಾಧ್ಯಮ ಶಾಲೆ – ಮಕರ ಸಂಕ್ರಾಂತಿ ಸಂಭ್ರಮ’

0

p>

ಧರ್ಮಸ್ಥಳ: ಶ್ರೀ ಧ. ಮ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಾಂಸ್ಕೃತಿಕ ಸಂಘದಿಂದ ಏರ್ಪಡಿಸಿದ ‘ಮಕರ ಸಂಕ್ರಾಂತಿ ಸಂಭ್ರಮ’ ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಪ್ರಾಥಮಿಕ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು.ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಭವಾನಿ ಬಿ. ರಾವ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಕರ ಸಂಕ್ರಾಂತಿಯನ್ನು ಯಾಕೆ ಆಚರಿಸಬೇಕು? ಅದರಿಂದ ಆಗುವ ಪ್ರಯೋಜನಗಳೇನು? ಎಳ್ಳು ಬೆಲ್ಲ ಸವಿಯುವುದರ ಮಹತ್ವವನ್ನು ಸವಿವರವಾಗಿ ತಿಳಿಸಿ, ಶುಭ ಹಾರೈಸಿದರು.

ಶಾಲಾ ಸಹ ಶಿಕ್ಷಕಿ ರಮಾ ರಾಜೇಶ್ ಮಕರ ಸಂಕ್ರಾಂತಿಯ ವಿಶೇಷತೆಗಳನ್ನ ತಿಳಿಸಿದರು. ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಪ್ರತಿ ತರಗತಿಯಲ್ಲಿ ಎಳ್ಳು ಬೆಲ್ಲವನ್ನು ಹಂಚಿ ಪಡೆದು ವಿದ್ಯಾರ್ಥಿಗಳು ಮಕರ ಸಂಕ್ರಾಂತಿ ಸಂಭ್ರಮಕ್ಕೆ ಮೆರುಗು ನೀಡಿದರು‌. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಗಾಳಿಪಟ ಹಾರಿಸಿ ಸಂಭ್ರಮಿಸಿದರು. ಭಕ್ತಿ ಸ್ವಾಗತಿಸಿ, ಲಹರಿ ವಂದಿಸಿದರು.

LEAVE A REPLY

Please enter your comment!
Please enter your name here