ಮಡಂತ್ಯಾರ್: ಯಂಗ್ ಟೈಗರ್ಸ್ ಅಲೆಕ್ಕಿ ಫ್ರೆಂಡ್ಸ್ ಇದರ 9 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಜ. 5 ರಂದು ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಈ ಕ್ರೀಡಾಕೂಟದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ರೂಪ ನವೀನ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಸಂಪತ್ ಬಿ. ಸುವರ್ಣ ಅಧ್ಯಕ್ಷರು, ಸುವರ್ಣ ಪ್ರತಿಷ್ಠಾನ ಬೆಳ್ತಂಗಡಿ ಹರೀಶ್ ಶೆಟ್ಟಿ ಪದೆಂಜಿಲಾ ಸದಸ್ಯ ಗ್ರಾಮ ಪಂಚಾಯತ್, ಉಮೇಶ್ ಸುವರ್ಣ ಸದಸ್ಯ ಗ್ರಾಮ ಪಂಚಾಯತ್ ಮಡಂತ್ಯಾರ್ ಇವರು ಉಪಸ್ಥಿರಿದ್ದರು. ಸಂಘದ ಅಧ್ಯಕ್ಷ ಆಕಾಶ್ ಕೋಟೆ ಅಧ್ಯಕ್ಷ ಸ್ಥಾನ ವಹಿಸಿದರು.
ವೀರ ಕೇಸರಿ ಆಂಬುಲೆನ್ಸ್ ರ ಚಾಲಕರಾದ ದೀಕ್ಷಿತ್. ಕರ್ನಾಟಕ ಕ್ರೀಡ ರತ್ನ ಕಂಬಳ ಓಟಗಾರರಾದ ಸುರೇಶ್ ಎಂ. ಶೆಟ್ಟಿ. ಇಂಚರ ಸೇವಾ ಬಳಗ ನಂದಳಿಕೆ ಇವರಿಗೆ ಸನ್ಮಾನಿಸಲಾಯಿತು. ಸ್ಥಳೀಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಸಂಜೆ ಸ್ಥಳೀಯರಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಿತು. ಎಂಗ್ ಟೈಗರ್ ಅಲೆಕ್ಕಿ ಫ್ರೆಂಡ್ಸ್ ಸದಸ್ಯರು. ಹಾಗೂ ಕಾರ್ಯಕರ್ತರು ಊರವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಸಂದೀಪ್ ಕುಕ್ಕಳ ಸ್ವಾಗತಿಸಿ, ಧನ್ಯವಾದ ಕೋರಿದರು. ವರದಿ ಹರ್ಷ ಬಳ್ಳಮಂಜ.