ಉಜಿರೆ: ಸಂತ ಅಂತೋನಿ ಚರ್ಚ್ ವಾರ್ಷಿಕ ಹಬ್ಬವು ಜ. 8 ರಂದು ಜರಗಿತು. ವಂ. ಫಾ. ಜೇಮ್ಸ್ ಡಿಸೋಜಾ ಪ್ರಧಾನ ದಿವ್ಯ ಬಲಿ ಪೂಜೆ ಅರ್ಪಿಸಿ, ಪ್ರವಚನ ನೀಡಿ ಹಬ್ಬದ ಶುಭಾಶಯ ಕೋರಿದರು. ಉಜಿರೆ ಧರ್ಮ ಕ್ಷೇತ್ರದ ಪ್ರಧಾನ ಧರ್ಮಗುರು ವಂ. ಫಾ. ಅಬೆಲ್ ಲೋಬೊ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ ಹಬ್ಬಕ್ಕೆ ಸಹಕರಿಸಿ ಧನ ಸಹಾಯ ಮಾಡಿದವರನ್ನು ವಂದಿಸಿದರು. ಧನ ಸಹಾಯ ನೀಡಿದವರನ್ನು ಮೇಣದ ಬತ್ತಿ ನೀಡಿ ಗೌರವಿಸಿದರು. ಬೆಳ್ತಂಗಡಿ ವಲಯದ ಪ್ರಧಾನ ಧರ್ಮ ಗುರು ಬೆಳ್ತಂಗಡಿ ಹೋಲಿ ರೆಡೀಮರ್ ಚರ್ಚ್ ಧರ್ಮ ಗುರು ವಂ. ಫಾ. ವಾಲ್ಟರ್ ಡಿಮೆಲ್ಲೊ ವಲಯದ ಪರ ವಾಗಿ ಹಬ್ಬದ ಶುಭಾಶಯ ಕೋರಿದರು. ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್, ಆರ್ಥಿಕ ಸಮಿತಿ ಸದಸ್ಯರು, ಪಾಲನಾ ಮಂಡಳಿ ಸದಸ್ಯರು, ವಾಳೆಯ ಗುರಿಕಾರರು ಸಹಕರಿಸಿದರು.
ಸಂತ ಅಂತೋಣಿಯವರು ಪವಾಡ ಪುರುಷ ಸಂತ. ಅವರಲ್ಲಿ ಪ್ರಾರ್ಥಿಸಿದರೆ ಎಲ್ಲವೂ ಸಿಗುತ್ತದೆ. ಕಳೆದು ಹೋದ ವಸ್ತು, ಕಷ್ಟ ಕಾರ್ಪಣ್ಯದಲ್ಲಿದ್ದವರಿಗೆ ಕಷ್ಟವನ್ನು ಪರಿಹರಿಸುವ ಶಕ್ತಿ ಅವರಲ್ಲಿದೆ. ಅವರ ಕೈಯಲ್ಲಿ ಬೈಬಲ್ ಪುಸ್ತಕ ಇದೆ. ಆ ಪುಸ್ತಕ ಮುಖಾಂತರ ಹಲವರ ಜೀವನವೇ ಬದಲಾಣೆ ಕಂಡಿದೆ. ಕೈಯಲ್ಲಿ ಹೂ ಇದೆ ಅದು ಪ್ರೀತಿಯ ಸಂಕೇತ. ಇದರಿಂದಲೇ ಇವರಲ್ಲಿ ಎಲ್ಲ ಧರ್ಮದವರು ಪ್ರಾರ್ಥಿಸುತ್ತಾರೆ. ಉಜಿರೆ ಪರಿಸರದಲ್ಲಿ ಸಂತ ಅಂತೋಣಿಯವರಲ್ಲಿ ಪ್ರಾರ್ಥಿಸಿದವರಿಗೆ ಹಲವು ಯೋಜನೆಗಳು ಜಾರಿಯಾಗಿದೆ. ಅದನ್ನು ನಾನು ಕಂಡಿದ್ದೇನೆ ಎಂದರು. ಇಲ್ಲಿಯ ಜನತೆಗೆ ಹಬ್ಬದ ಶುಭಾಶಯವನ್ನು ಕೋರುತ್ತೇನೆ.
– ವಂ. ಫಾ. ಜೇಮ್ಸ್ ಡಿಸೋಜಾ ಧರ್ಮಗುರು ಸಂತ ಕ್ಷೇವಿಯರ್ ಚರ್ಚ್ ಪೆರಾರ್.