ಪೆರೋಡಿತ್ತಾಯಕಟ್ಟೆ: ಜ. 4 ರಂದು ಸ. ಉ. ಪ್ರಾ. ಶಾಲೆಯಲ್ಲಿ ಮೆಟ್ರಿಕ್ ಮೇಳವನ್ನು ನಡೆಸಲಾಯಿತು. ಕಾರ್ಯಕ್ರಮಕ್ಕೆ ಎಸ್. ಡಿ.ಎಂ.ಸಿ ಅಧ್ಯಕ್ಷ ಮುಸ್ತಾಫಾ ಚಾಲನೆ ನೀಡಿದರು. ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಬೆಳೆದ ಹಣ್ಣು ತರಕಾರಿಗಳು, ತಾವು ಮನೆಯಲ್ಲಿ ತಯಾರಿಸಿದ ಜ್ಯೂಸ್, ತಿಂಡಿ ತಿನಿಸುಗಳು, ತಂಪು ಪಾನೀಯ, ಪಾನಿಪುರಿ ಇತ್ಯಾದಿಗಳನ್ನು ಸುಮಾರು 15 ಪುಟ್ಟ ಅಂಗಡಿಗಳಲ್ಲಿ ಜೋಡಿಸಿ ಉತ್ಸಾಹದಿಂದ ಮಾರಾಟ ಮಾಡಿದರು. ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳಲ್ಲಿ ಅಳತೆ ಹಾಗೂ ಅಂದಾಜುಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಮೆಟ್ರಿಕ್ ಮೇಳದ ಯಶಸ್ವಿಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಮುದಾಯ ಕಾರಣೀಭೂತರಾದರು.
ನೈಜ ವಸ್ತು ಮತ್ತು ನೈಜ ಹಣಕಾಸಿನ ವ್ಯವಹಾರದಿಂದ ವಿದ್ಯಾರ್ಥಿಗಳೆಲ್ಲರೂ ಸಂತೋಷಗೊಂಡರು. ಶಾಲಾ ಮುಖ್ಯ ಶಿಕ್ಷಕಿ ಬೆನೆಡಿಕ್ಟಾ ಪಾಯಸ್ ನೆರೆದವರೆಲ್ಲರನ್ನು ಸ್ವಾಗತಿಸಿದರು .ಗಣಿತ ಶಿಕ್ಷಕಿ ಕುಮಾರಿ ದೇವಿಕಾ ಪ್ರಾಯೋಗಿಕವಾಗಿ ವ್ಯವಹಾರದಲ್ಲಿ ಆಗುವ ಲಾಭ, ನಷ್ಟ, ರಿಯಾಯಿತಿಗಳ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಎಸ್. ಡಿ. ಎಮ್. ಸಿ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು. ಶಿಕ್ಷಕಿ ಜ್ಯೋತಿ ವಂದಿಸಿದರು.