p>
ಪಟ್ರಮೆ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರೋತ್ಸವ ಪ್ರಯುಕ್ತ ಗೊನೆ ಮಹೂರ್ತ ಜ. 6 ರಂದು ನೆರವೇರಿತು. ಕ್ಷೇತ್ರದ ಪಟ್ಟದರಸ ನಿತೇಶ್ ಬಳ್ಳಾಲ್ ಮಾರ್ಗದರ್ಶನದಂತೆ ಗೊನೆ ಮಹೂರ್ತ ನಡೆದು ಮದ್ಯಾಹ್ನ ಸಾಮೂಹಿಕ ಪ್ರಾರ್ಥನೆ ಹಾಗೂ ಮಹಾಪೂಜೆಯೊಂದಿಗೆ ಸಂಪನ್ನಗೊಂಡಿತು.
ಈ ಸಂಧರ್ಭದಲ್ಲಿ ಕ್ಷೇತ್ರದ ಪದಾಧಿಕಾರಿಗಳು ಭಕ್ತ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜ .14 ರಿಂದ 18 ರವರೆಗೆ ಕ್ಷೇತ್ರದ ವರ್ಷಾವದಿ ಜಾತ್ರೋತ್ಸವ ನಡೆಯಲಿದೆ ಎಂದು ಅನುವಂಶೀಯ ಆಡಳಿತ ಮುಖ್ಯಸ್ಥರಾದ ನಿತೇಶ್ ಬಲ್ಲಾಳ್ ತಿಳಿಸಿದ್ದಾರೆ.