ಬಳಂಜದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯಿಂದ ಮನೋಹರ್ ಪೂಜಾರಿಯವರಿಗೆ ಗೌರವಿಸಿ-ಸನ್ಮಾನ

0

p>

ಬಳಂಜ: ಭಾರತೀಯ ಸೇನೆಗೆ ಕಠಿಣ ತರಬೇತಿ ಪಡೆದು ಆಯ್ಕೆಗೊಂಡ ನಾಲ್ಕೂರಿನ ಮನೋಹರ್ ಪೂಜಾರಿಯವರಿಗೆ ಕುಣಿತ ಭಜನೆಯಲ್ಲಿ ರಾಜ್ಯ ಮಟ್ಟದಲ್ಲಿ ಹೆಸರನ್ನು ಪಡೆದಿರುವ ಬಳಂಜದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರಿಂದ ಗೌರವಾರ್ಪಣೆ ಮತ್ತು ಸನ್ಮಾನ ಕಾರ್ಯಕ್ರಮ ಜ. 5 ರಂದು ಬಳಂಜ ಶ್ರೀ ನಾರಾಯಣ ಗುರು ಸಮುದಾಯ ಭವನದ ವಠಾರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಬಳಂಜ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರು ಹಾಗೂ ಸುದ್ದಿ ಬಿಡುಗಡೆ ತಾಲೂಕು ಪ್ರತಿನಿಧಿಗಳು ಆಗಿರುವ ಸದಾನಂದ ಸಾಲಿಯಾನ್, ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಕೂಡ ತಾವು ಉತ್ತಮ ಶಿಕ್ಷಣವನ್ನು ಪಡೆದು ಉತ್ತಮ ಉದ್ಯೋಗವನ್ನು ಪಡೆಯಬೇಕು ಎಂದು ಹಂಬಲವಿರುತ್ತದೆ. ಅದಕ್ಕಾಗಿ ನಿರಂತರ ಪ್ರಯತ್ನ ಮತ್ತು ಸಂಸ್ಕಾರಯುತ ನಡೆ ನುಡಿಗಳು ಅಗತ್ಯವಾಗಿದ್ದು ಇದನ್ನು ಅಳವಡಿಸಿಕೊಂಡ ಮನೋಹರ್ ಪೂಜಾರಿಯವರು ಭಾರತೀಯ ಸೇನೆಗೆ ಆಯ್ಕೆಗೊಂಡಿರುವುದು ನಮಗೆಲ್ಲ ಹೆಮ್ಮೆಯಾಗಿದೆ ಎಂದು ಶುಭವನ್ನು ಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮನೋಹರ್ ಪೂಜಾರಿಯವರನ್ನು ಸನ್ಮಾನಿಸಿ ಮಾತನಾಡಿದ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ ಇದರ ಅಧ್ಯಕ್ಷರಾದ ಸಂತೋಷ್ ಪಿ. ಕೋಟ್ಯಾನ್ ಹಿಂದುಳಿದ ಸಮಾಜದ ಒಬ್ಬ ಯುವಕ ಇಂದು ಸೇನೆಯಲ್ಲಿ ಉದ್ಯೋಗ ಪಡೆಯುತ್ತಾರೆ ಎಂದಾದರೆ ಅವರಲ್ಲಿರುವ ಅಚಲವಾದ ಜೀವನದ ಗುರಿ ಮತ್ತು ನಿರಂತರ ಪ್ರಯತ್ನದ ಓದುವಿಕೆ ಮತ್ತು ಪರಿಪೂರ್ಣ ಶಿಕ್ಷಣ ಕಾರಣವಾಗಿದ್ದು ಮನೋಹರ್ ಪೂಜಾರಿ ಕಾಶ್ಮೀರಕ್ಕೆ ಉದ್ಯೋಗ ನಿಮಿತ್ತ ಕಠಿಣ ತರಬೇತಿಗಾಗಿ ತೆರಳುತ್ತಿರುವ ಈ ಸಂದರ್ಭದಲ್ಲಿ ಇಡೀ ತಾಲೂಕಿಗೆ ಹೆಮ್ಮೆಯಾಗಿದೆ ಹಾಗೂ ಅವರನ್ನು ಗುರುತಿಸಿ ಸನ್ಮಾನ ಮಾಡಿದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯವರ ಸೇವೆ ಶ್ಲಾಘನೀಯ ಎಂದು ಅಭಿಪ್ರಾಯ ಪಟ್ಟರು.

ಮನೋಹರ್ ಪೂಜಾರಿಯವರನ್ನು ಮಂಡಳಿಯ ವತಿಯಿಂದ ಶಾಲು, ಪೇಟ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮನೋಹರ್ ಪೂಜಾರಿಯವರು ಭಾರತೀಯ ಸೇನೆಗೆ ಆಯ್ಕೆ ಆಗಲು ಪಟ್ಟ ಪ್ರಯತ್ನ ಹಾಗೂ ಸವಾಲುಗಳ ಕುರಿತು ಮಂಡಳಿಯ ಸದಸ್ಯರೊಂದಿಗೆ ಮಾಹಿತಿಯನ್ನು ಹಂಚಿಕೊಂಡರು.

ಹಿರಿಯರಾದ ಮೋಹನ್ ಹೆಗ್ಡೆ ತೋಟದಪಲ್ಕೆ, ಮಂಡಳಿಯ ಸಹ ಸಂಚಾಲಕರಾದ ಪ್ರಣಾಮ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯ ಪ್ರಧಾನ ಸಂಚಾಲಕರು ಹಾಗೂ ಸಮಾಜ ಸೇವಕರೂ ಆಗಿರುವ ಹರೀಶ್ ವೈ ಚಂದ್ರಮ ಕಾರ್ಯಕ್ರಮ ನಿರೂಪಿಸಿದರು. ಮಂಡಳಿಯ ಅಧ್ಯಕ್ಷೆ ಜ್ಯೋತಿ ಮಜ್ಜೆನಿ ಮನೋಹರ್ ಪೂಜಾರಿಯವರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ತರಬೇತುದಾರರಾದ ಮಾನ್ಯ ಅನಿಸಿಕೆಗಳನ್ನು ವ್ಯಕ್ತಪಡಿಸಿ ಶುಭವನ್ನು ಹಾರೈಸಿದರು. ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರು ಹರೀಶ್ ವೈ. ಚಂದ್ರಮ ಇವರ ಪ್ರಧಾನ ಸಂಚಾಲಕತ್ವದಲ್ಲಿ ಈಗಾಗಲೇ ಹಲವು ಸಮಾಜಮುಖಿ ಸೇವೆಗಳನ್ನು ಮಾಡುತ್ತಾ ಬರುತ್ತಿದ್ದು, ಇದೀಗ ಸೇನೆಗೆ ಆಯ್ಕೆಗೊಂಡ ಮನೋಹರ್ ರವರನ್ನು ಗುರುತಿಸಿ ಪ್ರಪ್ರಥಮವಾಗಿ ಸನ್ಮಾನ ಮಾಡಿದ್ದು ಹೆಮ್ಮೆಯ ವಿಚಾರವಾಗಿದ್ದು, ಮನೋಹರ್ ಪೂಜಾರಿಯವರು ನಾಲ್ಕೂರು ಕೆಂಪುರ್ಜ ರಾಜು ಪೂಜಾರಿ ಮತ್ತು ಡಿಕಮ್ಮ ದಂಪತಿಗಳ ಪುತ್ರನಾಗಿದ್ದು ಜ. 18 ರಂದು ಜಮ್ಮು ಕಾಶ್ಮೀರಕ್ಕೆ ತೆರಳಲಿದ್ದಾರೆ.

LEAVE A REPLY

Please enter your comment!
Please enter your name here