p>
ಬೆಳಾಲು: ಮಾಯ ಅಯ್ಯಪ್ಪ ಭಕ್ತ ವೃಂದದ ವತಿಯಿಂದ ಜ. 4 ರಂದು ಮಾಯ ಶ್ರೀ ಮಹಾದೇವ ದೇವಸ್ಥಾನದ ವಠಾರದಲ್ಲಿ ಇರುಮುಡಿ ಪೂಜೆ ಕನ್ಯಾಡಿ 1, ಪಡ್ಡು ನಾರಾಯಣ ಗುರು ಸ್ವಾಮಿಯವರ ನೇತೃತ್ವದಲ್ಲಿ ಜರಗಿತು.
ಬೆಳಿಗ್ಗೆ ಅಯ್ಯಪ್ಪ ವೃತಧಾರಿಗಳ ಇರುಮುಡಿ ಕಟ್ಟಿ ಬಳಿಕ ಭಜನೆ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು. ಮಾಯ ಅಯ್ಯಪ್ಪ ಭಕ್ತ ವೃಂದದವರು, ಭಕ್ತರು, ವೃತದಾರಿಗಳ ಕುಟುಂಬಸ್ಥರು ಹಾಜರಿದ್ದರು. ನಂತರ ಅಯ್ಯಪ್ಪ ವೃತಧಾರಿಗಳು ಶಬರಿಮಲೆಗೆ ಯಾತ್ರೆ ಹೊರಟರು.