p>
ಮಿತ್ತಬಾಗಿಲು: ಹಾಲು ಉತ್ಪಾದಕ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ 13 ನಿರ್ದೇಶ ಸ್ಥಾನಗಳಿಗೆ ಅವಿರೋಧವಾಗಿ 8 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹಾಗೂ 5 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದರು.
ಅಧ್ಯಕ್ಷರಾಗಿ ಮಹೇಶ್ ಕೆ., ಉಪಾಧ್ಯಕ್ಷರಾಗಿ ರವಿ ಸುವರ್ಣ ಅವಿರೋಧವಾಗಿ ಜ.04 ರಂದು ಸಂಘದ ಕಛೇರಿಯಲ್ಲಿ ಚುನಾವಣಾ ಅಧಿಕಾರಿ ಪ್ರತಿಮಾ ನೇತ್ರತ್ವದಲ್ಲಿ ನಡೆಯಿತು.
ಸಾಮನ್ಯ ಕ್ಷೇತ್ರದಿಂದ ವಿನಯಚಂದ್ರ ಎಸ್. ಎನ್. ವಿನಯಚಂದ್ರ, ಕೇಶವ, ಸುರೇಶ್ ಪೂಜಾರಿ, ಸುಬಹ್ಮಣ್ಯ ಕೆ.,ರಮಾನಂದ, ಆನಂದ ಪಿ., ಪ.ಜಾತಿ ಕ್ಷೇತ್ರದಿಂದ ನೇಮಿರಾಜ, ಪ. ಪಂಗಡ ಕ್ಷೇತ್ರದಿಂದ ರೇಖಾ, ಹಿಂದುಳಿದ ಎ. ಪ್ರವರ್ಗ ಕ್ಷೇತ್ರದಿಂದ ರವಿ ಸುವರ್ಣ, ಹಿಂದುಳಿದ ಬಿ ಪ್ರವರ್ಗ ಕ್ಷೇತ್ರದಿಂದ ಮಹೇಶ್ ಕೆ., ಮಹಿಳಾ ಮೀಸಲು ಕ್ಷೇತ್ರದಿಂದ ಮೀನಾಕ್ಷಿ ಮತ್ತು ಅನಿತಾ ವಿಠಲ ಪೂಜಾರಿ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.