p>
ಬೆಳ್ತಂಗಡಿ : ವಿಶ್ವ ಹಿಂದೂ ಪರಿಷದ್, ಬಜರಂಗದಳ ಪ್ರಖಂಡದ ವತಿಯಿಂದ ಚಾರ್ಮಾಡಿಯ ಮೃತ್ಯುಂಜಯ ನದಿಗೆ ಮಾತೃಸ್ವರೂಪಿ ಗೋವಿನ ರುಂಡ, ಅಂಗಾಂಗಗಳನ್ನು ಎಸೆದು ಹಿಂದೂಗಳ ಪವಿತ್ರತೆಗೆ ಧಕ್ಕೆ ತಂದಿರುವ ದುಷ್ಟರನ್ನು ಬಂಧಿಸಲು ವಿಫಲವಾದ ಪೋಲಿಸ್ ಇಲಾಖೆ ಮತ್ತು ಸರಕಾರದ ವಿರುದ್ಧ ಜ. 06 ರಂದು ಬೆಳಿಗ್ಗೆ 10 ಗಂಟೆಗೆ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಪೇಟೆಯಲ್ಲಿ “ಕಕ್ಕಿಂಜೆ ಚಲೋ” ನಡೆಯಲಿದೆ.