p>
ಬೆಳ್ತಂಗಡಿ: ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ ಕಲ್ಲಡ್ಕ ಇದರ ಬೆಳ್ತಂಗಡಿ ಶಾಖೆ ವತಿಯಿಂದ ಕಲಾಸ್ತುತಿ-2025 ಕಾರ್ಯಕ್ರಮ ಜ. 4 ರಂದು ಸಾಯಂಕಾಲ ನಾರಾಯಣಗುರು ವಾಣಿಜ್ಯ ಸಂಕೀರ್ಣದಲ್ಲಿರುವ ಆಶಾ ಸಾಲಿಯಾನ್ ಕಲ್ಯಾಣ ಮಂಟಪದಲ್ಲಿ ನಡೆಯಿತು.
ವಿದುಷಿ ನಯನ ವಿ. ರೈ ದೀಪ ಪ್ರಜ್ವಲನೆ ಮಾಡಿದರು. ಈ ಸಂದರ್ಭದಲ್ಲಿ ನೃತ್ಯಗುರು ವಿದುಷಿ ವಿದ್ಯಾ, ಮನೋಜ್, ಶಿಷ್ಯವೃಂದ, ಪೋಷಕರು ಉಪಸ್ಥಿತರಿದ್ದರು.
ಪುತ್ತೂರು ವಿಶ್ವ ಕಲಾನಿಕೇತನ ಇನ್ಸಿಟ್ಯೂಟ್ ಆಫ್ ಆರ್ಟ್ಸ್ ಕಲ್ಚರ್ ವಿದ್ಯಾರ್ಥಿಗಳಿಂದ ನೃತ್ಯ ಪ್ರಸ್ತುತಿ ನಡೆಯಿತು.