p>
ವೇಣೂರು: ಕುಂಟಾಲಪಲ್ಕೆ ನಿವಾಸಿ ಆಶ್ವಿಯಾ ಜಿ.(21ವ).ಮನೆಯಿಂದ ನಾಪತ್ತೆಯಾದ ಘಟನೆ ಜ.03 ರಂದು ನಡೆದಿದೆ.
ಯುವತಿಯ ತಂದೆ ನೀಡಿದ ದೂರಿನಂತೆ ಮಗಳು ಆಶ್ವಿಯಾ.ಜಿ ಎಂಬಾಕೆ ಎಸ್. ಎಸ್. ಎಲ್. ಸಿ ವಿದ್ಯಾಭ್ಯಾಸದ ನಂತರ ಮನೆಯಲ್ಲಿಯೇ ಇದ್ದಳು.
ಜ.03 ರಂದು ಮಧ್ಯಾಹ್ನ 3:00 ಗಂಟೆಯಿಂದ ರಾತ್ರಿ 7 :00 ಗಂಟೆಯ ಮಧ್ಯದ ಅವಧಿಯಲ್ಲಿ ತಂದೆ ಮತ್ತು ಅವರ ಹೆಂಡತಿ ಚಿಕಿತ್ಸೆಗೆ ಬಿ.ಸಿ.ರೋಡ್ ಹೋದ ಸಮಯ, ಮಗಳು ಕಾಣೆಯಾಗಿದ್ದು, ಆಕೆಯ ಬಗ್ಗೆ ಹತ್ತಿರದ ಮನೆಯಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದರು ಪತ್ತೆಯಾಗಲಿಲ್ಲ.
ಈ ಬಗ್ಗೆ ವೇಣೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.