p>
ಬೆಳ್ತಂಗಡಿ: ಡಿ.17ರಂದು ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಚಾರ್ಮಾಡಿ ಗ್ರಾಮದ ಅನ್ನಾರು ಸೇತುವೆಯ ಕೆಳಭಾಗದಲ್ಲಿ ಮೃತ್ಯುಂಜಯ ನದಿ ಕಿನಾರೆಯಲ್ಲಿ ಹತ್ಯೆಗೈಯಲ್ಪಟ್ಟ ಜಾನುವಾರುಗಳ ತಲೆ ಹಾಗೂ ಇತರೇ ತ್ಯಾಜ್ಯಗಳನ್ನು ಸುಮಾರು 11 ಸಣ್ಣ ಸಣ್ಣ ಪ್ಲಾಸ್ಟಿಕ್ ಗೋಣಿ ಚೀಲಗಳಲ್ಲಿ ತುಂಬಿಸಿ ಎಸೆದು ಹೋಗಿರುವ ಘಟನೆಗೆ ಸಂಬಂಧಿಸಿ ಇದೀಗ ಈರ್ವರನ್ನು ಬಂಧಿಸಲಾಗಿದೆ.
ಕೃತ್ಯಕ್ಕೆ ಸಂಬಂಧಿಸಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ. 79/2024ರಂತೆ ಕಲಂ 4, 12 ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಜಾನುವಾರು ಸಂರಕ್ಷಣಾ ಅಧಿನಿಯಮ 2020ರಂತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮಹಮ್ಮದ್ ಇರ್ಷಾದ್ (ಪ್ರಾಯ 28 ವ) ಇವರ ತಂದೆ ಆದಂ. ಇವರ ವಾಸ: ಕತ್ರಿಗುಡ್ಡೆ ಮನೆ ಚಾರ್ಮಾಡಿ ಗ್ರಾಮ, ಬೆಳ್ತಂಗಡಿ ತಾಲೂಕು ಮತ್ತು ಮಹಮ್ಮದ್ ಅಜ್ಮಲ್ (ಪ್ರಾಯ 30 ವ) ಇವರ ತಂದೆ ರವೂಫ್ ಎಂ.ಇಬ್ರಾಹಿಂ. ಇವರ ವಾಸ: ಪಿಲಿಚಂಡಿ ಕಲ್ಲು ಮನೆ, ಕುವೆಟ್ಟು ಗ್ರಾಮ , ಬೆಳ್ತಂಗಡಿ ತಾಲೂಕು.ಇಬ್ಬರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.