ಗುರುವಾಯನಕೆರೆ: ಶಕ್ತಿನಗರ ಸರ್ಕಲ್ ನಲ್ಲಿ ಮಾಜಿ ಶಾಸಕರು ದಿ. ವಸಂತ ಬಂಗೇರರ ಪುತ್ಥಳಿ ಸ್ಥಾಪನೆ ಮಾಡುವಂತೆ ಕುವೆಟ್ಟು ಗ್ರಾಮ ಪಂಚಾಯಿತಿಗೆ ಮನವಿ

0

p>

ಬೆಳ್ತಂಗಡಿ: ಗುರುವಾಯನಕೆರೆ, ಕಾರ್ಕಳ ಮೂಡುಬಿದ್ರೆ ಕೂಡು ರಸ್ತೆಯ ಶಕ್ತಿನಗರ ಸರ್ಕಲ್ ನಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರವನ್ನು 5 ಬಾರಿ ಪ್ರತಿನಿಧಿಸಿರುವ ಬಡವರವರ ಪರ ಹೋರಾಟ ಮಾಡಿದ, ಭ್ರಷ್ಟಾಚಾರವನ್ನು ಕಠಿಣ ಶಬ್ದಗಳಲ್ಲಿ ವಿರೋಧಿಸುತ್ತಿದ್ದ, ನೇರ ನಡೆನುಡಿಯ ನಾಯಕ ಕುವೆಟ್ಟು ಗ್ರಾಮ ಪಂಚಾಯತ್ ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ದಿವಂಗತ ಕೆ. ವಸಂತ ಬಂಗೇರವರ ಪುತ್ಥಳಿಯನ್ನು ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುರುವಾಯನಕೆರೆ ಕಾರ್ಕಳ, ಮೂಡುಬಿದರೆ ಕೂಡು ರಸ್ತೆಯ ಶಕ್ತಿನಗರ ಸರ್ಕಲ್ ನಲ್ಲಿ ಸ್ಥಾಪನೆ ಮಾಡುವಂತೆ ಮಾಜಿ ತಾಲೂಕು ಪಂಚಾಯತ್ ಗೋಪಿನಾಥ್ ನಾಯಕ್ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಧನಂಜಯ್ ರಾವ್ ಗುರವಾಯನಕೆರೆ, ಕಾಶ್ಮೀರ್ ಪಾಯಸ್ ಮಾಜಿ ಪಂಚಾಯತ್ ಸದಸ್ಯರು, ರಿಯಾಜ್ ಪಿಲಿಚಾಂಡಿಕಲ್ಲು ಮಾಜಿ ಪಂಚಾಯತ್ ಸದಸ್ಯರು, ಪ್ರವೀಣ್ ಶೆಟ್ಟಿ, ಮಹಮ್ಮದ್ ಹನೀಫ್, ದೇರಪ್ಪ ಶೆಟ್ಟಿ, ಸೀತಾರಾಮ್ ಶೆಟ್ಟಿ, ರಾಜು ಪೂಜಾರಿ, ಜಯರಾಮ್ ಪೂಜಾರಿ, ಕೆ. ಎಸ್ ಕಲಾ ಬಂಗೇರ, ಮಜೀದ್, ಮದ್ದಡ್ಕ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇಮ್ತಿಯಜ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here