ಪದ್ಮುಂಜ: ಸರಕಾರಿ ಪ್ರೌಢ ಶಾಲೆಯಲ್ಲಿ ವಾರ್ಷಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜ. 4 ರಂದು ಶಾಲೆಯ ಮುಖ್ಯ ಶಿಕ್ಷಕಿ ಸುಮತಿ ಪಿ. ಎನ್. ಅಧ್ಯಕ್ಷತೆಯಲ್ಲಿ ಜರಗಿತು. ಕಣಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೀತಾರಾಮ ಮಡಿವಾಳ ಕಾರ್ಯಕ್ರಮ ವನ್ನು ಉದ್ಘಾಟನೆ ಮಾಡಿ ಶುಭ ಹಾರೈಸಿದರು.
ಮುಖ್ಯ ಶಿಕ್ಷಕಿ ಸುಮತಿ ಪಿ. ಎನ್. ವರದಿ ವಾಚಿಸಿ, ಶಾಲೆಗೆ ಅಗತ್ಯವಿರುವ ಕುಡಿಯುವ ನೀರಿಗೆ ಕೊಳವೆ ಬಾವಿ, ಆವರಣ ಗೋಡೆ ಹಾಗೂ ಹೂ ತೋಟದ ಬೇಡಿಕೆಗಳನ್ನು ಮುಂದಿಟ್ಟರು. ಶಿಕ್ಷಕರಾದ ಆನಂದ, ಸವಿತಾ, ವಿನಯಕುಮಾರ್, ಅನಂತ ಕ್ರಷ್ಣ ವಿವಿಧ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಸಿಕೊಟ್ಟರು.
ಮುಖ್ಯ ಅತಿಥಿಯಾದ ವೆಂಕಪ್ಪ ಹೆಡ್ ಕಾನ್ಸ್ ಸ್ಟೇಬಲ್ ಪುತ್ತೂರು ಠಾಣೆ ಇವರು ಮಾತನಾಡಿ ಕಾನೂನನ್ನು ಯಾರು ಗೌರವಿಸುತ್ತಾರೊ, ಅವರನ್ನು ಸಮಾಜ ಗೌರವಿಸುತ್ತದೆ ಎಂದರು. ನೀವು ಪ್ರಯಾಣ ಮಾಡುವಾಗ ಕಾನೂನು ಪ್ರಕಾರ ನಿಯಮ ಪಾಲಿಸಿದರೆ ಹೆಲ್ಮೆಟ್ ಧರಿಸಿದರೆ ಅಪಘಾತದಿಂದ ಪಾರಾಗಬಹುದು ಎಂದರು.
ನೀವು ನಿಮ್ಮ ಮುಂದಿನ ಜೀವನ ಬಗ್ಗೆ ಒಂದು ಗುರಿ ಇಟ್ಟುಕೊಳ್ಳಬೇಕು. ಏನಾದರೊಂದು ಸಾಧನೆ ಮಾಡಲೇಬೇಕು ಎಂದರು. ಇಂದಿನ ದಿನಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಗಾಂಜಾ ಡ್ರಗ್ಸಿನಂತಹ ದುಶ್ಚಟಗಳಿಗೆ ಬಲಿಯಾಗಬೇಡಿ. ನೀವು ಬಹಳ ಜಾಗರೂಕತೆಯಿಂದ ಜೀವಿಸಿ. ನಿಮ್ಮ ಮೇಲೆ ಯಾವುದೇ ಒಂದು ಪ್ರಕರಣ ದಾಖಲಾಗದಂತೆ ನೋಡಿಕೊಳ್ಳಿ ನಿಮ್ಮ ಮೇಲೆ ಒಂದು ಪ್ರಕರಣ ದಾಖಲಾದರೆ ನಿಮ್ಮ ಜೀವನದಲ್ಲಿ ಯಾವುದೇ ಒಂದು ಹುದ್ದೆ ಪಡೆಯಲು ನಿಮಗೆ ಸಾಧ್ಯವೇ ಇಲ್ಲ ಎಂದರು.
ವರ್ಗಾವಣೆಗೊಂಡ ಸದಾನಂದ ಭೀರಾದಾರ್ ರವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಭೀರಾಧಾರ್ ವಿದ್ಯಾರ್ಥಿಗಳಾದ ನೀವು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಜೀವಿಸಿದರೆ ನೀವು ಸಮಾಜದಲ್ಲಿ ಉನ್ನತ ಸ್ಥಾನ ಮಾಣಗಳನ್ನು ಪಡೆಯುವಿರಿ ಎಂದರು. ಆಂಗ್ಲ ಅತಿಥಿ ಶಿಕ್ಷಕ ಅನಂತ ಕೃಷ್ಣ ರವರನ್ನು ಸನ್ಮಾನಿಸಲಾಯಿತು.
ಎಸ್. ಡಿ. ಎಂ ಸದಸ್ಯರಾದ ಪುರುಷೋತ್ತಮ ಗೌಡ, ಶೋಭಾ, ಸತೀಶ್ ಶೆಟ್ಟಿ, ಅಬ್ದುಲ್ ರಝಾಕ್ ಹಾಗೂ ದಾನಿ ಸದಾಶಿವ ಶೆಟ್ಟಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ವಿನಯಕುಮಾರ್ ಸ್ವಾಗತಿಸಿದರು. ಶಿಕ್ಷಕಿಯರಾದ ಗಾಯತ್ರಿ, ಸಂದ್ಯಾ, ಸವಿತಾ ಕಾರ್ಯಕ್ರಮ ನಿರೂಪಿಸಿದರು. ತದ ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಗಾಯತ್ರಿ ಧನ್ಯವಾದ ಸಲ್ಲಿಸಿದರು.