ಧರ್ಮಪ್ರಾಂತ್ಯದಲ್ಲಿ ಹೊಸ ವರ್ಷದ ಪ್ರಯುಕ್ತ ಸೌಹಾರ್ದ ಕೂಟ

0

p>

ಬೆಳ್ತಂಗಡಿ: ಧರ್ಮಪ್ರಾಂತ್ಯದ ನೇತ್ರತ್ವದಲ್ಲಿ ಜ. 03 ರಂದು ಜ್ಞಾನನಿಲಯ ಬೆಳ್ತಂಗಡಿಯಲ್ಲಿ, ತಾಲೂಕಿನ ವಿವಿಧ ಗಣ್ಯ ವ್ಯಕ್ತಿಗಳನ್ನು, ವಿವಿಧ ಸಂಘ ಸಂಸ್ಥೆಗಳ ನಾಯಕರನ್ನು ಹಾಗೂ ಧರ್ಮಪ್ರಾಂತ್ಯದ ವಿವಿಧ ಕಾರ್ಯಗಳಿಗೆ ಸಹಕರಿಸುತ್ತಿರುವರನ್ನು ಕರೆದು ಪ್ರತಿವರ್ಷದಂತೆ ಈ ವರ್ಷ ಕೂಡಾ ಸೌಹಾರ್ದ ಕೂಟವನ್ನು ಏರ್ಪಡಿಸಲಾಗಿದೆ.

‘ಸಾಮಾಜಿಕ ಭಾವೈಕ್ಯತೆ ಕಾಪಾಡುವಲ್ಲಿ ನಮ್ಮ ಪಾತ್ರ’ ಎನ್ನುವ ವಿಷಯದ ಕುರಿತು ಮುಖ್ಯ ಸಂದೇಶವನ್ನು ಡಾ. ಟಿ. ಕೃಷ್ಣಮೂರ್ತಿ ಇವರು ನೀಡಿದರು. ಕಾರ್ಯಕ್ರಮದ ಆಶಯದ ಕುರಿತು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಲಾರೆನ್ಸ್ ಮುಕ್ಕುಯಿ ವಿವರಿಸಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು.

ಹೊಸವರ್ಷದ ಹಾಗೂ ಕ್ರಿಸ್ ಮಸ್ ಹಬ್ಬದ ಸಂಭ್ರಮವನ್ನು ಬೆಳ್ತಂಗಡಿ ತಾಲೂಕು ತಹಸೀಲ್ದಾರ್ ಫ್ರಥ್ವಿ ಸಾನಿಕಂ ನೇತ್ರತ್ವದಲ್ಲಿ ತಾಲೂಕಿನ ವಿವಿಧ ಗಣ್ಯ ವ್ಯಕ್ತಿಗಳು ಜೊತೆ ಸೇರಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ಬೆಳ್ತಂಗಡಿ ತಾಲೂಕು ಆರೋಗ್ಯ ಅಧಿಕಾರಿ ಸಂಜಾತ್ ವಿತರಿಸಿದರು. ಹೊಸ ವರ್ಷದ ಅದೃಷ್ಟ ವ್ಯಕ್ತಿಯನ್ನು ಚೀಟಿ ತೆಗೆಯುವ ಮೂಲಕ ಆಯ್ಕೆ ಮಾಡಿ ಬಹುಮಾನವನ್ನು ಬೆಳ್ತಂಗಡಿ ವಿಧಾನಸಭಾ ಸದಸ್ಯರಾದ ಮಾನ್ಯ ಹರೀಶ್ ಪೂಂಜಾರವರು ವಿತರಿಸಿದರು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರೀಯ ಅಗ್ನೆಸ್ ಚಾಕೋ, ಬೆಳ್ತಂಗಡಿ ತಾಲೂಕು ಕಾಮಗಾರಿಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಮುಖ್ಯಸ್ಥರು ಮತ್ತು ಸಿಬ್ಬಂದಿ ವರ್ಗದವರು, ಪಟ್ಟಣ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ನ ವಿವಿಧ ಗಣ್ಯ ವ್ಯಕ್ತಿಗಳು, ಮಾದ್ಯಮ ಮಿತ್ರರು, ಸೌಹಾರ್ದ ವೇದಿಕೆಯ ವಿವಿಧ ಗಣ್ಯ ವ್ಯಕ್ತಿಗಳು, ಧರ್ಮಗುರುಗಳು, ದರ್ಮಭಗಿನಿಯರು ಹಾಗೂ ಅನೇಕ ವಿಶಿಷ್ಟ ಆಹ್ವಾನಿತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮಾರಿಯಂಬಿಕ ಆಂಗ್ಲ ಮಾದ್ಯಮ ಶಾಲೆ ಬಂಗಾಡಿ ವಿದ್ಯಾರ್ಥಿನಿಯರು ಸ್ವಾಗತ ನೃತ್ಯವನ್ನು ಮಾಡಿದರು. ಧರ್ಮಪ್ರಾಂತ್ಯದ ಫ್ಯಾಮಿಲಿ ಅಪೋಸ್ಟೋಲೇಟ್ ಇದರ ನಿರ್ದೇಶಕ ವಂದನಿಯ ಫಾದರ್ ಥೋಮಸ್ ಪುಲ್ಲಾಟ್ ಪಾರ್ಥನೆಯನ್ನು ನೆರವೇರಿಸಿದರು.

ಧರ್ಮಪ್ರಾಂತ್ಯದ ವಿಕಾರ್ ಜನರಲ್ ಅತೀ ವಂದನಿಯ ಫಾದರ್ ಜೋಸೆಫ್ ವಲಿಯ ಪರಂಬಿಲ್ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಧನ್ಯವಾದವಿತ್ತರು. ಕಾರ್ಯಕ್ರಮದ ನಿರೂಪಣೆಯನ್ನು ಡಿ. ಕೆ. ಆರ್. ಡಿ. ಎಸ್. ನಿರ್ದೇಶಕ

ವಂದನಿಯ ಫಾದರ್ ಬಿನೋಯಿ ಏ. ಜೆ. ಹಾಗೂ ಡಿ. ಕೆ. ಆರ್. ಡಿ. ಎಸ್. ನ ಸಿಬ್ಬಂದಿ ಸಿಸಿಲೀಯಾ ನೆರವೇರಿಸಿದರು. ಆಗಮಿಸಿದ ಎಲ್ಲರೂ ಔತಣಾ ಕೂಟದಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮ ಮುಕ್ತಾಯ ಗೊಳಿಸಲಾಯಿತು.

LEAVE A REPLY

Please enter your comment!
Please enter your name here