ಮಿತ್ತಬಾಗಿಲು: ಮಲವಂತಿಗೆ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ (ರಿ), ಯುವ ಬಿಲ್ಲವ ವೇದಿಕೆ ಮತ್ತು ಯುವವಾಹಿನಿ ಸಂಚಲನಾ ಸಮಿತಿಯ ಸಹಯೋಗದೊಂದಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಲಶಾಭಿಷೇಕ, ಬ್ರಹ್ಮಶ್ರೀ ಗುರುಭವನ ಉದ್ಘಾಟನಾ ಕಾರ್ಯಕ್ರಮವು ಜ. 11 ಮತ್ತು 12 ರಂದು ಕೊಲ್ಲಿಯಲ್ಲಿ ನಡೆಯಲಿದೆ.
ಜ. 11 ರಂದು ಸಾಯಂಕಲ 3:30 ರಿಂದ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಆವರಣದಿಂದ ಬ್ರಹ್ಮಶ್ರೀ ನಾರಾಯಣಗುರುಗಳ ಮೂರ್ತಿ ಮೆರವಣಿಗೆ ಹಾಗೂ ತಂತ್ರಿವರ್ಯರ ಆಗಮನ, ಹೊರಕಾಣಿಕೆ ಮೆರವಣಿಗೆ ಹಾಗೂ ರಾತ್ರಿ ಪಂಚಗವ್ಯ, ಸ್ವಸ್ತಿ ಪುಣ್ಯಾದ, ದೇವತಾ ಪ್ರಾರ್ಥನೆ ಬಿಂಬ ಶುದ್ದಿ, ಸುದರ್ಶನ ಹೋಮ, ವಾಸ್ತು ರಾಕ್ಷೊಘ್ನ ಹೋಮ, ಬಿಂಬ ವಾಸ್ತು, ವಾಸ್ತು ಬಲಿ, ಪ್ರಾಕಾರ ಬಲಿ, ಮಂಡಲ ಪೂಜೆ, ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಜ. 12 ರಂದು ಪ್ರಾತಃಕಾಲ 5 ರಿಂದ ಗಣಹೋಮ, ತೋರಣ ಮುಹೂರ್ತ, ಕಲಶ ಪೂಜೆ, ಪ್ರಧಾನ ಹೋಮ, ಶಿಖರ ಪ್ರತಿಷ್ಠೆ, ಬ್ರಹ್ಮಶ್ರೀ ನಾರಾಯಣ ಗುರು ಮೂರ್ತಿ ಪ್ರತಿಷ್ಠೆ, ಕಲಶಾಭಿಷೇಕ, ಮಧ್ಯಾಹ್ನ ಘಂಟೆ 12 ಕ್ಕೆ ಗುರುಪೂಜೆ ಪ್ರಾರ್ಥನೆ, ಪ್ರಸಾದ ವಿತರಣೆ ನಡೆಯಲಿದೆ.
ಸಂಜೆ 4:45 ಕ್ಕೆ ಐಶ್ವರ್ಯ ಪೂಜೆ ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 9:30 ರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.