ಉಜಿರೆ: ಗ್ರಾಮ ಪಂಚಾಯತಿಗೆ ಮಧ್ಯಪ್ರದೇಶದ ಅಧ್ಯಯನ ತಂಡ ಭೇಟಿ

0

p>

ಉಜಿರೆ: ಗ್ರಾಮ ಪಂಚಾಯತ್ ಗೆ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಮಧ್ಯಪ್ರದೇಶ ರಾಜ್ಯದ ಅಧ್ಯಯನ ಪ್ರವಾಸ ತಂಡದ ಅಧಿಕಾರಿಗಳು ಜ. 03 ರಂದು ಭೇಟಿ ನೀಡಿದರು. ಗ್ರಾಮ ಪಂಚಾಯತ್ ಕಚೇರಿ ಡಿಜಿಟಲ್‌ ಗ್ರಂಥಾಲಯ, ಕೂಸಿನ ಮನೆ ತ್ಯಾಜ್ಯ ವಿಲೇವಾರಿ ಘಟಕ ಮತ್ತು ಮಲತ್ಯಾಜ್ಯ ವಿಲೇವಾರಿ ಘಟಕ, ಎಂ. ಆರ್. ಎಫ್. ಘಟಕ ವೀಕ್ಷಿಸಿ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.

ತಂಡದೊಂದಿಗೆ ದ. ಕ. ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್ ಕಾರ್ಯಪಾಲಕ, ಅಭಿಯಂತರರು ಬೆಳ್ತಂಗಡಿ ತಾಲೂಕು ಕಾರ್ಯಪಾಲಕ, ಅಭಿಯಂತರರು ಬೆಳ್ತಂಗಡಿ ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಭವಾನಿ ಶಂಕರ, ಉಜರೆ ಗಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಕಾರಂತ್, ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ, ಪಂಚಾಯತ್ ಸದಸ್ಯರು, ಜಿಲ್ಲಾ ಪಂಚಾಯತ್ ಸ್ವಚ್ಚ ಭಾರತ್ ಯೋಜನೆಯ ಸಿಬ್ಬಂದಿಗಳು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಅದ್ಯಯನ ತಂಡದೊಂದಿಗೆ ಭಾಗವಹಿಸಿದರು.

LEAVE A REPLY

Please enter your comment!
Please enter your name here